ರಾಜಕಾರಣದಲ್ಲಿ ಕುಟುಂಬಗಳ ಅಧಿಪತ್ಯ ಹೊಸದಲ್ಲ. ಸಿನಿಮಾ ಸ್ಟಾರ್‌ಗಳು ತಮಿಳುನಾಡು ರಾಜಕೀಯ ನಾಯಕರಾಗುವುದು, ಸಿಎಂ ಆಗುವುದು ರಾಜ್ಯದ ಇತಿಹಾಸದಲ್ಲಿ ಹಾಸುಹೊಕ್ಕಾಗಿದೆ. ಆದರೆ, ಈ ಬಾರಿ ಒಂದು ಅಚ್ಚರಿ ನಡೆದಿದೆ. ಡಿಎಂಕೆಯಲ್ಲಿ ಎಂ. ಕರುಣಾನಿಧಿ ಅವರು ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಕಡೆಗಣಿಸಿ ಮಗ ’ ಎಂ.ಕೆ. ಸ್ಟಾಲಿನ್ ’ಗೆ ಮಣೆ ಹಾಕುತ್ತಿದ್ದಾಗ ಇದು ಪಕ್ಷಕ್ಕೆ ಎಸಗಲಾದ ದ್ರೋಹ ಎಂದು ಕೂಗಾಡಿ ಡಿಎಂಕೆ ತೊರೆದಿದ್ದ ವೈಕೋ ಅವರೇ ಸದ್ಯ ಪುತ್ರ ವ್ಯಾಮೋಹದಲ್ಲಿ ಕುರುಡಾಗಿದ್ದಾರೆ.
ಪುಟಾಣಿಯ ಪವರ್‌ಫುಲ್ ಭಾಷಣ: ವಿಡಿಯೋ ಶೇರ್ ಮಾಡಿದ ಪ್ರಿಯಾಂಕಾ
ತಾವು ಸ್ಥಾಪಿಸಿ, ಬೆಳೆಸಿರುವ ‘ಎಂಡಿಎಂಕೆ’ ಪಕ್ಷವನ್ನು ಮುನ್ನಡೆಸುವ ಹೊಣೆಯನ್ನು 49 ವರ್ಷದ ದೊರೈ ವೈಯಾಪುರಿ ಅವರಿಗೆ ನೀಡುತ್ತಿದ್ದಾರೆ. 77 ವರ್ಷದ ವೈಕೋ ಅಲಿಯಾಸ್ ’ ವೈಯಾಪುರಿ ಗೋಪಾಲಸ್ವಾಮಿ’ ಅವರು ಸದ್ಯದ ಮಟ್ಟಿಗೆ ರಾಜ್ಯಸಭಾ ಸದಸ್ಯರು ಕೂಡ ಹೌದು. ಬಲಪಂಥೀಯ ವಿಚಾರಧಾರೆಗಳನ್ನು ತೀವ್ರವಾಗಿ ಖಂಡಿಸುವ ಏರುಧ್ವನಿಯಾಗಿ ದೇಶಾದ್ಯಂತ ವೈಕೋ ಅವರು ಪರಿಚಿತರಾಗಿದ್ದಾರೆ. ಆದರೆ, ಇಷ್ಟು ವರ್ಷಗಳಾದ ಮೇಲೆ ತಮ್ಮ ಉತ್ತರಾಧಿಕಾರಿಯಾಗಲು ಸ್ವಂತ ಮಗನನ್ನು ಆರಿಸಿಕೊಂಡಿದ್ದಾರೆ.
ಕೊಬ್ಬರಿ ಬೆಳೆಗಾರರಿಗೆ ಬಂಪರ್
ಪಕ್ಷ ದ 25 ಜಿಲ್ಲೆಗಳ ಕಾರ್ಯದರ್ಶಿಗಳ ಮಹತ್ವದ ಸಭೆ ಮತ್ತು ನೂತನ ’ಕೇಂದ್ರ ಕಚೇರಿ ಕಾರ್ಯದರ್ಶಿ’ ಆಯ್ಕೆ ಚುನಾವಣೆಯು ಚೆನ್ನೈನ ಎಂಡಿಎಂಕೆ ಕೇಂದ್ರ ಕಚೇರಿಯಲ್ಲಿ ನಡೆಯಿತು. ಆ ಪೈಕಿ ದೊರೈಗೆ 106 ರಲ್ಲಿ104 ಮತಗಳು ಸಿಕ್ಕು ಜಯ ಸಾಧಿಸಿದ್ದಾರೆ. ಹಾಗಾಗಿ ಇದು ಕುಟುಂಬ ರಾಜಕಾರಣ ಅಲ್ಲ, ಪಕ್ಷದ ಒಕ್ಕೊರಲ ನಿರ್ಧಾರ ಎಂದು ಉತ್ತರಾಧಿಕಾರಿ ಘೋಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೈಕೋ ಸಮರ್ಥನೆ ಕೊಟ್ಟಿದ್ದಾರೆ.
ದೊರೈ ಅಧಿಕಾರ ವಹಿಸಿಕೊಳ್ಳುವ ಬಗ್ಗೆ ಮಾತನಾಡಿದ ಎಂಡಿಎಂಕೆ ಕಾರ್ಯಕರ್ತನೊಬ್ಬ, ’’ ನಾಯಕರು (ವೈಕೋ) ಸಾಕಷ್ಟು ಹೋರಾಟ ನಡೆಸಿ ವೃದ್ಧಾಪ್ಯಕ್ಕೆ ತೆರಳುತ್ತಿದ್ದಾರೆ. ಅವರ ಪ್ರಭಾವವನ್ನು ಪಕ್ಷದಲ್ಲಿ ಮತ್ತು ರಾಜ್ಯದ ರಾಜಕಾರಣದಲ್ಲಿ ಕಾಪಾಡಿಕೊಳ್ಳಲು ಅವರ ಪುತ್ರ ದೊರೈ ಅವರಿಂದ ಮಾತ್ರವೇ ಸಾಧ್ಯ’’ ಎಂದು ಮಾಧ್ಯಮಗಳ ಎದುರು ವಾದಿಸಿದ್ದಾರೆ.
ಚಾಲಕನಿಲ್ಲದೆ ಚಲಿಸಿದ ಬೈಕ್..! ವೈರಲ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ
ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ವೈಕೋ ಅವರ ದ್ವಂದ್ವ ನಿಲುವು ಬಗ್ಗೆ ಭಾರಿ ಟೀಕೆ ವ್ಯಕ್ತವಾಗಿದೆ. ಡಿಎಂಕೆ ತೊರೆಯುವಾಗ ಇದ್ದಂತಹ ಸಿದ್ಧಾಂತ, ಮಗನ ಮಮಕಾರದಲ್ಲಿ ಮುಳುಗಿ ಹೋಯಿತು. ಎಂಡಿಎಂಕೆ ಕಟ್ಟಿ ಬೆಳೆಸಿದ ಅನೇಕ ನಾಯಕರು ಇದ್ದರೂ, ಉದ್ಯಮಿಯಾಗಿದ್ದು ರಾಜಕೀಯದ ಆಳ-ಅಗಲ ತಿಳಿಯದ ಮಗ ದೊರೈಗೆ ವೈಕೋ ಪಟ್ಟಕಟ್ಟಿದ್ದಾರೆ ಎಂದು ಟ್ವೀಟ್ ಮಾಡುತ್ತಾ ಕಾಲೆಳೆಯುತ್ತಿದ್ದಾರೆ.