ಸಾರ್ಸ್-ಕೋವಿ-2 ಸೋಂಕಿನ ವಿರುದ್ಧ ನೀಡಲಾಗುವ ಲಸಿಕೆಯ ಪ್ರಭಾವ ಕೆಲವೇ ತಿಂಗಳಲ್ಲಿ ಕ್ಷೀಣಿಸಿದರೂ ಸಹ ತೀವ್ರವಾದ ಕೋವಿಡ್‌ನಿಂದ ಅಲ್ಪ ಮಟ್ಟಿನ ಸುರಕ್ಷತೆ ಮಾತ್ರ ಹಾಗೆಯೇ ಇರಲಿದೆ ಎಂದು ʼದಿ ಲ್ಯಾನ್ಸೆಟ್ʼ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸುತ್ತಿದೆ.
ನೀಡಲಾದ ಲಸಿಕೆಯ ಆಧಾರದ ಮೇಲೆ ಲಸಿಕೆಯ ಪ್ರಭಾವ ಬೇರೆ ಬೇರೆ ವೇಗದಲ್ಲಿ ಕ್ಷೀಣವಾಗುತ್ತದೆ ಎಂದಿರುವ ಸ್ವೀಡನ್‌ನ ಉಮೆಯಾ ವಿವಿಯ ಪ್ರಾಂಶುಪಾಲ ಪೀಟರ್ ನಾರ್ಡ್‌ಸ್ಟಾರ್ಮ್,”ಸೋಂಕಿನ ವಿರುದ್ಧ ಲಸಿಕೆಯ ರಕ್ಷಣೆ ಕೆಲವೇ ತಿಂಗಳಲ್ಲಿ ಕ್ಷೀಣವಾಗುತ್ತದೆ ಎಂಬುದು ಕೆಟ್ಟ ಸುದ್ದಿಯಾದರೆ, ಆಸ್ಪತ್ರೆ ಸೇರುವಂತೆ ಮಾಡಬಲ್ಲ ತೀವ್ರ ಸೋಂಕಿನ ವಿರುದ್ಧದ ರಕ್ಷಣೆ ಹಾಗೇ ಇರಲಿದೆ ಎಂಬುದು ಒಳ್ಳೆಯ ಸುದ್ದಿ. ಹಾಗಾಗಿ ಲಸಿಕೆ ಪಡೆಯುವುದು ಜಾಣ ಹಾಗೂ ಮುಖ್ಯವಾದ ನಡೆ,” ಎನ್ನುತ್ತಾರೆ.
ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಸೊಳ್ಳೆ ಓಡಿಸಲು ಮಹಿಳೆ ಸೂಚಿಸಿದ ಉಪಾಯ
ಸ್ವೀಡನ್‌ನ ಸಾರ್ವಜನಿಕ ಆರೋಗ್ಯ ಏಜೆನ್ಸಿಯ ರೆಜಿಸ್ಟ್ರಿ ಮಾಹಿತಿಯ ಅಧ್ಯಯನ ಮಾಡಿರುವ ಸಂಶೋಧಕರು, ಈ ಅಂಶ ಬೆಳಕಿಗೆ ತಂದಿದ್ದಾರೆ. ಒಟ್ಟಾರೆ ನಾಲ್ಕು ದಶಲಕ್ಷ ವ್ಯಕ್ತಿಗಳ ಪ್ರಕರಣಗಳನ್ನು ಗಮನಿಸಿದ ಬಳಿಕ ಮೇಲ್ಕಂಡ ಮಾಹಿತಿಯನ್ನು ಖಾತ್ರಿ ಪಡಿಸಲಾಗಿದೆ.
ಫೈಜ಼ರ್‌ನ ಎರಡೂ ಲಸಿಕೆ ಪಡೆದ ಆರು ತಿಂಗಳ ಬಳಿಕ ಲಸಿಕೆಯ ಕ್ಷಮತೆಯು 29 ಪ್ರತಿಶತಕ್ಕೆ ಕ್ಷೀಣಿಸಿದರೆ ಮಾಡೆರ್ನಾ ಲಸಿಕೆಯ ತೀವ್ರತೆ ಆರು ತಿಂಗಳಲ್ಲಿ 59 ಪ್ರತಿಶತಕ್ಕೆ ಕುಗ್ಗಲಿದ ಎಂದು ತಿಳಿಸಲಾಗಿದೆ. ಇದೇ ವೇಳೆ, ಅಸ್ಟ್ರಾಜ಼ೆಂಕಾ ಮದ್ದುಗಳಲ್ಲಿ ಒಂದು ತಿಂಗಳ ಬಳಿಕ ಯಾವುದೇ ರೀತಿಯ ರಕ್ಷಣಾ ಕ್ಷಮತೆ ಇರದು ಎಂದು ಅಧ್ಯಯನ ತಿಳಿಸಿದೆ.