ನವದೆಹಲಿ: ದೇಶದಲ್ಲಿ ಜನವರಿ 16 ರಿಂದ ಕೊರೋನಾ ಲಸಿಕೆ ನೀಡಲಿದ್ದು, ಈಗಾಗಲೇ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಅಂದ ಹಾಗೆ, ಜನವರಿ 16 ರಿಂದಲೇ ಲಸಿಕೆ ಹಂಚಿಕೆಗೆ ಚಾಲನೆ ನೀಡಲು ಹಬ್ಬಗಳು ಕಾರಣವೆನ್ನಲಾಗಿದೆ.
ಜನವರಿ 14 ಮತ್ತು 15 ರಂದು ದೇಶದಲ್ಲಿ ಹಬ್ಬಗಳು ಇರುತ್ತವೆ. ಸಂಕ್ರಾಂತಿ, ಪೊಂಗಲ್ ಮೊದಲಾದ ಹಬ್ಬಗಳು ಇರುವುದರಿಂದ ಜನವರಿ 14 ಮತ್ತು 15 ರ ಬದಲಿಗೆ 16 ರಿಂದ ಲಸಿಕೆ ನೀಡಿಕೆ ಆರಂಭಿಸಲು ನಿರ್ಧರಿಸಲಾಗಿದೆ.
ಭಾರತದ ಲಸಿಕೆ ಅಗ್ಗ, ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಭಾರತ ಅಗ್ಗದ ಲಸಿಕೆಯನ್ನು ಇಡೀ ವಿಶ್ವಕ್ಕೆ ಸಿಗುವಂತೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.
ಹಬ್ಬಗಳು ಇರುವುದರಿಂದ ಜನವರಿ 16 ರಿಂದ ದೇಶದಲ್ಲಿ ಲಸಿಕೆ ನೀಡಲಾಗುವುದು. ಮೊದಲ ಕೇಸ್ ಪತ್ತೆಯಾಗಿ ವರ್ಷ ತುಂಬುವ ಮೊದಲೇ ಲಸಿಕೆಯನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.