alex Certify ಹೆಲಿಕಾಪ್ಟರ್​ ನಲ್ಲಿಯೇ ಕುಳಿತು ಚುನಾವಣಾ ಪ್ರಚಾರ ಮಾಡಿದ ಮಧ್ಯಪ್ರದೇಶ ಸಿಎಂ.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಲಿಕಾಪ್ಟರ್​ ನಲ್ಲಿಯೇ ಕುಳಿತು ಚುನಾವಣಾ ಪ್ರಚಾರ ಮಾಡಿದ ಮಧ್ಯಪ್ರದೇಶ ಸಿಎಂ.​..!

ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಹೆಲಿಕಾಪ್ಟರ್​ನಲ್ಲಿ ಕುಳಿತು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ಮೂಲಕ ಹೊಸ ಮಾದರಿಯ ಚುನಾವಣಾ ಪ್ರಚಾರವನ್ನು ಮಾಡಿದ್ದಾರೆ.

ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಲು ಸಿಎಂ ಶಿವರಾಜ್ ಸಿಂಗ್​ ಚೌಹಾಣ್​ ಉತ್ತರಾಖಂಡ್​ನ ಯಮುನೋತ್ರಿಗೆ ತೆರಳಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಶಿವರಾಜ್​ ಸಿಂಗ್​ ಚೌಹಾಣ್​ ಇದ್ದ ಹೆಲಿಕಾಪ್ಟ್​ ಟೇಕಾಫ್​ ಆಗದ ಕಾರಣ ಹೆಲಿಕಾಪ್ಟರ್​ನಲ್ಲಿಯೇ ಕುಳಿತುಕೊಳ್ಳಬೇಕಾಯ್ತು.

ನಿಗದಿತ ಸಮಯಕ್ಕೆ ಸ್ಥಳವನ್ನು ತಲುಪಲು ಸಾಧ್ಯವಾಗದ ಕಾರಣ ಅವರು ದೂರವಾಣಿ ಕರೆ ಮೂಲಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು.

ಯಾವುದೇ ರಾಜಕೀಯ ನಾಯಕರು ಹೆಲಿಕಾಪ್ಟರ್​ನಲ್ಲಿ ಕುಳಿತು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ದು ಭಾರತದ ಚುನಾವಣಾ ಇತಿಹಾಸದಲ್ಲಿಯೇ ಇದೆ ಮೊದಲಾಗಿದೆ.

ಉತ್ತರಾಖಂಡ ವಿಧಾನಸಭೆ ಚುನಾವಣೆ 2022 ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.

— Office of Shivraj (@OfficeofSSC) February 11, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...