alex Certify ದಾಖಲೆ ಪತ್ರಗಳ ಮೇಲೆ ಮೃತ ಮಹಿಳೆಯ ಹೆಬ್ಬೆರಳಿನ ಗುರುತು ಒತ್ತಿದ ವ್ಯಕ್ತಿ: ಆಘಾತಕಾರಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಖಲೆ ಪತ್ರಗಳ ಮೇಲೆ ಮೃತ ಮಹಿಳೆಯ ಹೆಬ್ಬೆರಳಿನ ಗುರುತು ಒತ್ತಿದ ವ್ಯಕ್ತಿ: ಆಘಾತಕಾರಿ ವಿಡಿಯೋ ವೈರಲ್

ಆಗ್ರಾ: ಮಕ್ಕಳನ್ನು ಚೆನ್ನಾಗಿ ನೋಡಿ ದೊಡ್ಡವರನ್ನಾಗಿ ಮಾಡುವ ತಂದೆ-ತಾಯಿಗಳು ನಂತರ ತಮ್ಮ ಮಕ್ಕಳಿಂದಲೇ ಕಡೆಗಣನೆಗೆ ಒಳಗಾಗುತ್ತಾರೆ. ಆಸ್ತಿಗಾಗಿ ಮಕ್ಕಳು ತಮ್ಮ ಪೋಷಕರಿಗೆ ಇನ್ನಿಲ್ಲದ ಕಾಟ ಕೊಡುತ್ತಾರೆ. ಇದೀಗ ದಾಖಲೆಗಳಲ್ಲಿ ಮೃತ ಮಹಿಳೆಯ ಹೆಬ್ಬೆರಳಿನ ಗುರುತನ್ನು ವ್ಯಕ್ತಿಯೊಬ್ಬ ತೆಗೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ವಂಚನೆಯಿಂದ ಹೆಬ್ಬೆರಳಿನ ಗುರುತನ್ನು ಪಡೆದಿಕೊಳ್ಳುತ್ತಿದ್ದಾನೆ. ಈ ನೀಚತನದ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

45 ಸೆಕೆಂಡ್‌ಗಳ ವಿಡಿಯೋದಲ್ಲಿ ವೃದ್ಧೆಯ ಶವವನ್ನು ಕಾರಿನ ಹಿಂದಿನ ಸೀಟಿನಲ್ಲಿ ಮಲಗಿಸಲಾಗಿದೆ. ವ್ಯಕ್ತಿಯು ಮೃತ ಮಹಿಳೆಯ ಹೆಬ್ಬೆರಳಿನ ಮುದ್ರೆಗಳನ್ನು ಕೈಯಲ್ಲಿ ಹಿಡಿದುಕೊಂಡ ಪತ್ರಗಳಿಗೆ ಒತ್ತುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ವ್ಯಕ್ತಿನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಲವಾರು ಮಂದಿ ಬಳಕೆದಾರರು ಈ ವಿಡಿಯೋವನ್ನು ರೀಟ್ವೀಟ್ ಮಾಡಿ ನ್ಯಾಯ ಕೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...