alex Certify ಉತ್ತರ ಪ್ರದೇಶದಲ್ಲಿ ಲಾಕ್​​ಡೌನ್ ನಿಯಮ ಮತ್ತಷ್ಟು ಸಡಿಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶದಲ್ಲಿ ಲಾಕ್​​ಡೌನ್ ನಿಯಮ ಮತ್ತಷ್ಟು ಸಡಿಲ

ಉತ್ತರ ಪ್ರದೇಶ ಜನತೆಗೆ ಬಿಗ್​ ರಿಲೀಫ್​ ಎಂಬಂತೆ ಲಾಕ್​ಡೌನ್​ ನಿಯಮಾವಳಿಗಳನ್ನು ಸಾಕಷ್ಟು ಸಡಿಲಗೊಳಿಸಿದೆ. ಈ ಮೂಲಕ ಕಂಟೈನ್​ಮೆಂಟ್​​​ ಅಲ್ಲದ ಸ್ಥಳಗಳಲ್ಲಿ ಗರಿಷ್ಟ 100 ಮಂದಿ ಸೇರಲು ಅವಕಾಶ ನೀಡಲಾಗಿದೆ.

ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್​ ಅವಸ್ಥಿ ರಾಜ್ಯದ ಪೊಲೀಸ್​ ಹಾಗೂ ಆಡಳಿತ ಅಧಿಕಾರಿಗಳನ್ನು ಉದ್ದೇಶಿಸಿ ಪತ್ರ ಬರೆದಿದ್ದಾರೆ.

ಈ ಪತ್ರದ ಮೂಲಕ ಕೋವಿಡ್​ 19 ಮಾರ್ಗಸೂಚಿಗಳನ್ನು ಪಾಲಿಸುತ್ತಾ 100 ಜನರು ಒಂಡೆಡೆ ಸೇರಲು ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

ಈ ಮೊದಲು ಜೂನ್​ 19ರ ಆದೇಶದ ಪ್ರಕಾರ, ಹೊರಾಂಗಣ ಹಾಗೂ ಒಳಾಂಗಣ ಪ್ರದೇಶಗಳಲ್ಲಿ ಗರಿಷ್ಟ 50 ಮಂದಿ ಒಂದೆಡೆ ಸೇರಲು ಮಾತ್ರ ಅವಕಾಶ ನೀಡಲಾಗಿತ್ತು. ಹಾಗೂ ಪ್ರತಿಯೊಬ್ಬರು 2 ಅಡಿ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿತ್ತು.

ಪ್ರಸ್ತುತ ಹೊರಡಿಸಲಾಗಿರುವ ಪ್ರಕಟಣೆಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಒತ್ತಿ ಹೇಳಲಾಗಿದೆ.
.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...