ಚರ್ಮ, ಕೂದಲು ಡ್ರೈ ಆಗುವುದು ಮಾತ್ರವಲ್ಲ ಕೆಲವೊಮ್ಮೆ ಮೂಗಿನಲ್ಲಿ ಶುಷ್ಕತೆ, ನೋವು, ಬಿರುಕಿನ ಸಮಸ್ಯೆ ಕಾಡುತ್ತದೆ. ಇದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.
*ಮೂಗಿನೊಳಗೆ ಡ್ರೈ ಅನಿಸುತ್ತಿದ್ದರೆ ರಾತ್ರಿ ಮಲಗುವಾಗ ಮೂಗಿಗೆ ಕೆಲವು ಹನಿ ತೆಂಗಿನೆಣ್ಣೆ ಅಥವಾ ಆಲಿವ್ ಆಯಿಲ್ ಅನ್ನು ಹಾಕಿ. ಇದರಿಂದ ಮೂಗಿನಲ್ಲಿ ರಕ್ತ ಸೋರುವುದು, ಒಣಗುವುದು ಕಡಿಮೆಯಾಗುತ್ತದೆ.
*ವಿಟಮಿನ್ ಇ ಕ್ಯಾಪ್ಸುಲ್ ರೋಗನಿರೋಧಕವಾಗಿದೆ. ಇದರ ಎಣ್ಣೆಯನ್ನು ಮೂಗಿಗೆ ಹಾಕುವುದರಿಂದ ಮೂಗಿನಲ್ಲಿರುವ ಊತ, ಗಾಯ ನಿವಾರಣೆಯಾಗುತ್ತದೆ.
*ಮೂಗಿನ ಶುಷ್ಕತೆಯನ್ನು ತೆಗೆದುಹಾಕಲು ತುಪ್ಪವನ್ನು ಬಳಸಿ. ಇದು ನಂಜುನಿವಾರಕ ಗುಣವನ್ನು ಹೊಂದಿದ್ದು, ಉರಿಯೂತವನ್ನು ಕಡಿಮೆ ಮಾಡುತ್ತದೆ.