ವಾತಾವರಣದ ಮಾಲಿನ್ಯಕಾರಕಗಳಿಂದ, ಕೊಳೆ, ಧೂಳಿನಿಂದ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಆದರೆ ಈ ಮೊಡವೆಗಳು ನಿವಾರಣೆಯಾದರೂ ಅದರ ಕಲೆ ಮಾತ್ರ ಹಾಗೇ ಉಳಿದುಬಿಡುತ್ತದೆ. ಈ ಕಲೆಗಳನ್ನು ನಿವಾರಿಸಲು ರಾಸಾಯನಿಕಗಳಿಂದ ತಯಾರಿಸಿದ ಕ್ರೀಂಗಳನ್ನು ಬಳಸುವ ಬದಲು ನೈಸರ್ಗಿಕವಾದ ಈ ವಸ್ತುಗಳನ್ನು ಬಳಸಿ ಮೊಡವೆ ಕಲೆಗಳನ್ನು ನಿವಾರಿಸಿಕೊಳ್ಳಿ.
*ತುಳಸಿ ಎಲೆ : ತುಳಸಿ ಮೊಡವೆ ಕಲೆಗಳನ್ನು ನಿವಾರಿಸುತ್ತದೆ. ಹಾಗಾಗಿ ಕೆಲವು ತುಳಸಿ ಎಲೆಗಳನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ಮಲಗುವ ಮುನ್ನ ಅದರಿಂದ ಮುಖವನ್ನು ವಾಶ್ ಮಾಡಿ.
*ಕಿತ್ತಳೆ : ಕಿತ್ತಳೆ ಹಣ್ಣಿನಲ್ಲಿರುವ ಆಮ್ಲೀಯತೆ ಮತ್ತು ವಿಟಮಿನ್ ಸಿ ಅಂಶವು ಮೊಡವೆಗಳ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗಾಗಿ ಕಿತ್ತಳೆ ಸಿಪ್ಪೆಯ ಪುಡಿಯನ್ನು ನೀರಿನಲ್ಲಿ ಬೆರೆಸಿ ಮುಖದ ಮೇಲೆ ಹಚ್ಚಿ, ಒಣಗಿದ ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ.
*ಪಪ್ಪಾಯ : ಇದು ಸತ್ತ ಚರ್ಮಕೋಶಗಳನ್ನು ಮತ್ತು ಹೆಚ್ಚುವರಿ ಎಣ್ಣೆ ಪದರಗಳನ್ನು ತೆಗೆದುಹಾಕುತ್ತದೆ. ಹಾಗಾಗಿ ಪಪ್ಪಾಯವನ್ನು ಪೇಸ್ಟ್ ಮಾಡಿ ಅದನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ.
*ಲೋಳೆರಸ : ಲೋಳೆರಸ(ಅಲೋವೆರಾ) ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದನ್ನು ಪೀಡಿತ ಪ್ರದೇಶಕ್ಕೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ.