ಚಳಿಗಾಲದಲ್ಲಿ ಚರ್ಮ ಸುಲಭವಾಗಿ ಶುಷ್ಕಗೊಳ್ಳುವ ಕಾರಣ ದೇಹದಲ್ಲಿ ಸೂಕ್ತವಾದ ತೇವಾಂಶ ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ. ಈ ಕೆಳಕಂಡ ಸೊಪ್ಪುಗಳ ಬಳಕೆಯಿಂದಾಗಿ ನಿಮ್ಮ ಚರ್ಮದ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಅನುಕೂಲವಾಗುತ್ತದೆ.
ಮೆಂತ್ಯೆ ಸೊಪ್ಪು
ಮೆಂತ್ಯೆ ಸೊಪ್ಪಿನ ಸೇವನೆಯಿಂದ ಚರ್ಮದ ಮೇಲಿನ ಕಲೆಗಳೆಲ್ಲಾ ನಿವಾರಣೆಯಾಗಿ, ತ್ವಚೆಗೆ ಕಾಂತಿ ಸಿಗಲಿದೆ. ಮೆಂತ್ಯೆಯ ಪೇಸ್ಟ್ ಮಾಡಿಕೊಂಡು, ಅದಕ್ಕೆ ಎರಡು ಚಮಚ ಜೇನುತುಪ್ಪ ಸೇರಿಸಿ, ಮುಖಕ್ಕೆ ಹಚ್ಚಿ 20 ನಿಮಿಷಗಳ ಬಳಿಕ ಶುದ್ಧ ನೀರಿನಲ್ಲಿ ತೊಳೆಯಬೇಕು.
ಪುದೀನಾ
ಪುದೀನಾ ಸೊಪ್ಪನ್ನು ಒಂದೊಳ್ಳೆ ಫೇಸ್‌ಪ್ಯಾಕ್ ಆಗಿಯೂ ಬಳಸಬಹುದಾಗಿದೆ. ಪುದೀನಾ ಸೊಪ್ಪಿನ ಪೇಸ್ಟ್‌ಅನ್ನು ಸೌತೇಕಾಯಿ ರಸ ಹಾಗೂ ಜೇನುತುಪ್ಪದೊಂದಿಗೆ ಬೆರೆಸಿ, ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ಶುದ್ಧ ನೀರಿನಲ್ಲಿ ತೊಳಯುವುದರಿಂದ ಚರ್ಮ ಇನ್ನಷ್ಟು ಕಳೆಗಟ್ಟುತ್ತದೆ.
ತುಳಸಿ
ಆರೋಗ್ಯದ ದೃಷ್ಟಿಯಿಂದ ಅಸಂಖ್ಯ ಪ್ರಯೋಜನಗಳನ್ನು ಹೊಂದಿರುವ ತುಳಸಿ ಎಲೆಗಳಿಂದ ಮುಖದ ಕಾಂತಿ ವರ್ಧಿಸಬಹುದಾಗಿದೆ. ನಿಂಬೇರಸದೊಂದಿಗೆ ತುಳಸಿ ಪೇಸ್ಟ್ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ತೊಳೆಯಬೇಕು.
ಬೆಚ್ಚಿಬೀಳಿಸುವಂತಿದೆ ಈ ಗೋಲ್ಗಾಪ್ಪ ತಿನ್ನುವ ಪರಿ…!
ಕರಿಬೇವಿನ ಸೊಪ್ಪು
ಕರಿಬೇವಿನ ಸೊಪ್ಪು ಚರ್ಮ ಹಾಗೂ ಕೂದಲಿಗೆ ಸಂಜೀವಿನಿಯಂತೆ. ಕರಿಬೇವಿನ ಪೇಸ್ಟ್ ಸಿದ್ಧಪಡಿಸಿ, ಅದಕ್ಕೆ ಸ್ವಲ್ಪ ಮುಲ್ತಾನೀ ಮಿಟ್ಟಿ ಹಾಗೂ ಒಂದು ಚಮಚೆ ಜೇನುತುಪ್ಪ ಬೆರೆಸಿ ಹಚ್ಚಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿದ 20 ನಿಮಿಷಗಳ ಬಳಿಕ ತೊಳೆಯಿರಿ.
ಕೊತ್ತಂಬರಿ ಸೊಪ್ಪು
ಚರ್ಮದ ಕಾಂತಿ ವರ್ಧಿಸುವಂತೆ ಮಾಡುವ ಕೊತ್ತಂಬರಿ ಸೊಪ್ಪನ್ನು ಪೇಸ್ಟ್ ಮಾಡಿಕೊಂಡು ಒಂದು ಚಮಚ ನಿಂಬೇರಸದೊಂದಿಗೆ ಬೆರೆಸಿ. ಬಳಿಕ ಈ ಪೇಸ್ಟ್‌ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ 20 ನಿಮಿಷಗಳ ಬಳಿಕ ತೊಳೆಯಿರಿ