ಇ-ಕಾಮರ್ಸ್ ಪ್ಲಾಟ್‌ಫಾರಂಗಳ ಮೂಲಕ ಬುಕ್ ಮಾಡುವ ಆಟೋರಿಕ್ಷಾ ಸೇವೆಗಳ ಮೇಲೆ ಜನವರಿ 1, 2022ರಿಂದ 5%ರಷ್ಟು ಜಿಎಸ್‌ಟಿ ವಿಧಿಸಲಾಗುವುದು. ನವೆಂಬರ್ 18ರಂದು ವಿತ್ತ ಸಚಿವಾಲಯದ ಕಂದಾಯ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ಜಿ.ಎಸ್.ಟಿ. ವಿನಾಯಿತಿಯನ್ನು ಹಿಂಪಡೆದಿರುವುದಾಗಿ ತಿಳಿಸಲಾಗಿದೆ.
ಇದೇ ವೇಳೆ ಆಫ್‌ಲೈನ್/ಮ್ಯಾನುವಲ್ ಮೋಡ್ ಮೂಲಕ ಆಟೋರಿಕ್ಷಾ ಸೇವೆಗಳಿಗೆ ಜಿ.ಎಸ್.ಟಿ. ವಿನಾಯಿತಿಯನ್ನು ಮುಂದುವರೆಸಲಾಗಿದೆ. ಆದರೆ ಇದೇ ಸೇವೆಗಳನ್ನು ಇ-ಕಾಮರ್ಸ್ ಮೂಲಕ ಪಡೆಯುವುದಾದರೆ 5%ನಷ್ಟು ಜಿ.ಎಸ್.ಟಿ. ಪಾವತಿಸಬೇಕಾಗುತ್ತದೆ.
ಗುಟ್ಕಾ ಜಗಿಯುತ್ತಾ ಕ್ರಿಕೆಟ್ ಪಂದ್ಯ ವೀಕ್ಷಣೆ: ವೈರಲ್ ವಿಡಿಯೋಗೆ ಮೀಮ್ಸ್ ಗಳ ಸುರಿಮಳೆ
ಈ ತಿದ್ದುಪಡಿಯಿಂದ ಇ-ಕಾಮರ್ಸ್ ಕಂಪನಿಗಳಿಗೆ ನಕಾರಾತ್ಮಕ ಪರಿಣಾಮವಾಗುವ ಸಾಧ್ಯತೆಗಳಿವೆ. ಪ್ರಯಾಣಿಕರಿಗೆ ಅಗ್ಗದ ದರಗಳಲ್ಲಿ ಆರಾಮದಾಯಕ ಹಾಗೂ ಅನುಕೂಲದಾಯಕ ಸಾರಿಗೆ ಸೇವೆಗಳನ್ನು ಒದಗಿಸುತ್ತಾ ಬಂದಿವೆ ಓಲಾ, ಊಬರ್‌ನಂಥ ಪೋರ್ಟಲ್‌ಗಳು.