ಕಾರಿನಲ್ಲಿ ಇಬ್ಬರು ಮಕ್ಕಳ ಮೃತದೇಹವನ್ನು ಇಟ್ಟುಕೊಂಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು ಶವಗಳನ್ನು ವಶಕ್ಕೆ ಪಡೆಯಲಾಗಿದೆ. ಅಮೆರಿಕದಲ್ಲಿ ನಡೆದ ಘಟನೆ ಇದಾಗಿದ್ದು ಈ ಇಬ್ಬರು ಮಕ್ಕಳು ಆರೋಪಿ ಮಹಿಳೆಯ ಸೋದರಳಿಯ ಹಾಗೂ ಸೊಸೆ ಆಗಿದ್ದರು ಎಂದು ವರದಿಯಾಗಿದೆ.
ಬಾಲ್ಟಿಮೋರ್ ನಿವಾಸಿಯಾದ ನಿಕೋಲೆ ಜಾನ್ಸನ್ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತ ಬಾಲಕಿ 7 ವರ್ಷ ವಯಸ್ಸಿನವಳಾಗಿದ್ದರೆ ಬಾಲಕ 5 ವರ್ಷ ಪ್ರಾಯದವನಾಗಿದ್ದ ಎನ್ನಲಾಗಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ಇಬ್ಬರು ಮಕ್ಕಳನ್ನ ಕೊಲೆ ಮಾಡಿದ್ದ ಈಕೆ ಅವರ ದೇಹವನ್ನು ಸೂಟ್ಕೇಸ್ನಲ್ಲಿ ಹಾಕಿ ಕಾರಿನಲ್ಲಿ ಇರಿಸಿದ್ದಳು. ಅಲ್ಲದೇ ಈ ಕಾರನ್ನು ಸಾಮಾನ್ಯ ರೀತಿಯಲ್ಲೇ ಬಳಕೆ ಮಾಡುತ್ತಿದ್ದಳು. ಒಂದು ವರ್ಷದ ಬಳಿಕ ಈ ಎರಡು ದೇಹವನ್ನು ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಹಾಕಿ ಇರಿಸಿದ್ದಳು ಎನ್ನಲಾಗಿದೆ . ವೇಗವಾಗಿ ಕಾರನ್ನು ಓಡಿಸಿದ್ದ ಕಾರಣಕ್ಕೆ ಜಾನ್ಸನ್ ಕಾರನ್ನು ನಿಲ್ಲಿಸಿದ ವೇಳೆ ಪೊಲೀಸರಿಗೆ ಈ ಮೃತದೇಹದ ವಿಚಾರ ತಿಳಿದಿದೆ.