alex Certify ಅಫ್ಘನ್​ ಹೆಣ್ಣುಮಕ್ಕಳ ಪಾಲಿಗೆ ಸೂಪರ್​ ವುಮನ್ ಆಗಿ ಬದಲಾದ್ರು ಅಮೆರಿಕದ ಈ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಫ್ಘನ್​ ಹೆಣ್ಣುಮಕ್ಕಳ ಪಾಲಿಗೆ ಸೂಪರ್​ ವುಮನ್ ಆಗಿ ಬದಲಾದ್ರು ಅಮೆರಿಕದ ಈ ಮಹಿಳೆ..!

ತಾಲಿಬಾನಿಗಳು ಅಪ್ಘಾನಿಸ್ತಾದ ಮೇಲೆ ಹಿಡಿತ ಸಾಧಿಸಿದ ಬಳಿಕ ಅಲ್ಲಿನ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ. ಈ ಎಲ್ಲಾ ಆತಂಕಗಳ ನಡುವೆಯೂ ಅಫ್ಘಾನ್​​ ಗರ್ಲ್ಸ್​ ರೋಬೋಟಿಕ್​ ತಂಡವು ಅಪ್ಘನ್​ ರಾಷ್ಟ್ರವು ಯಾವ ಮಟ್ಟದಲ್ಲಿ ಪ್ರಗತಿ ಸಾಧಿಸಿತ್ತು ಅನ್ನೋದನ್ನ ತೋರಿಸುತ್ತಿದೆ.

ಗರ್ಲ್​ ರೊಬೋಟಿಕ್​ ತಂಡದ ಸದಸ್ಯೆಯಾದ ಅಮೆರಿಕದ ಮಹಿಳೆಯು ಹೆಣ್ಣು ಮಕ್ಕಳನ್ನು ಕಾಬೂಲ್​ನಿಂದ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಮೂಲಕ ತಾನು ಸೂಪರ್​ ವುಮನ್ ಅನ್ನೋದನ್ನು ಸಾಬೀತು ಪಡಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹಿಂಸಾಚಾರ ಹೆಚ್ಚಾಗುತ್ತಿದ್ದಂತೆಯೇ ಆಲಿಸನ್​ ರೆನ್ಯೂ ಎಂಬವರು 10 ಬಾಲಕಿಯರನ್ನು ರಕ್ಷಿಸಲು ಇನ್ನಿಲ್ಲದ ಹರಸಾಹಸ ಪಟ್ಟಿದ್ದಾರೆ. ಹಾರ್ವಡ್​ ವಿಶ್ವವಿದ್ಯಾಲಯದ ಪದವೀಧರೆ ಹಾಗೂ ಭಾಷಣಗಾರ್ತಿಯಾಗಿರುವ ರೆನ್ಯೂ 2019 ರಲ್ಲಿ ರೊಬೋಟಿಕ್​ ಟೀಂನ್ನು ಭೇಟಿ ಮಾಡಿದ್ದರು. ಹಾಗೂ ಅಂದಿನಿಂದ ಈ ತಂಡದ ಜೊತೆ ನಿರಂತರ ಸಂಪರ್ಕದಲ್ಲಿದ್ದರು.

16 ರಿಂದ 18 ವರ್ಷ ಪ್ರಾಯದ ಯುವವಿಜ್ಞಾನಿಗಳನ್ನು ಹೊಂದಿದ್ದ ಈ ತಂಡವು ತಾಲಿಬಾನಿಗಳ ಅಟ್ಟಹಾಸದಿಂದ ಭಯಬೀತರಾಗಿದ್ದರು. ಕೇವಲ ಭರವಸೆಯೊಂದನ್ನು ಬಿಟ್ಟು ಇನ್ಯಾವ ಆಶಾಭಾವವನ್ನೂ ಹೊಂದಿರದ 60 ವರ್ಷದ ರೆನ್ಯೂ ಸೀದಾ ಕತಾರ್​ಗೆ ಪ್ರಯಾಣ ಬೆಳೆಸಿದ್ರು ಹಾಗೂ ಅಲ್ಲಿಂದ ನೇರವಾಗಿ ಅಮೆರಿಕ ರಾಯಭಾರ ಕಚೇರಿಯಲ್ಲಿರುವ ಸ್ನೇಹಿತರ ಸಹಾಯವನ್ನು ಕೋರಿದರು. ಇವರು ಬಾಲಕಿಯರನ್ನು ರಕ್ಷಿಸಲು ನೆರವಾದರು.

ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಶೇರ್​ ಮಾಡಿರುವ ರೆನ್ಯೂ ಈಗಾಗಲೇ 10 ಹೆಣ್ಣುಮಕ್ಕಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ. ಇದು ಅಮೆರಿಕ ರಾಯಭಾರ ಕಚೇರಿಯ ಸಹಾಯದಿಂದ ಮಾತ್ರ ಸಾಧ್ಯವಾಗಿದೆ. ಆದರೆ ಇನ್ನೊಂದು ತಂಡವನ್ನು ಇದೇ ರೀತಿ ರಕ್ಷಣೆ ಮಾಡಬೇಕಾದ ಹೊಣೆ ನಮ್ಮ ಮೇಲಿದೆ. ನಿಮ್ಮೆಲ್ಲರ ಪ್ರಾರ್ಥನೆ ಇರಲಿ. ಅನೇಕರಿಗೆ ನಾನೇಕೆ ಅಮೆರಿಕನ್ನರನ್ನು ರಕ್ಷಣೆ ಮಾಡುತ್ತಿಲ್ಲ ಎಂದು ಎನಿಸರಬಹುದು. ಆದರೆ ನನಗೆ ಅಫ್ಘಾನಿಸ್ತಾನದಲ್ಲಿ ಗೊತ್ತಿರುವವರು ಇವರು ಮಾತ್ರ. ಹೀಗಾಗಿ ನನ್ನ ಕೈಲಾದಷ್ಟು ಜನರನ್ನು ಕಾಪಾಡುವ ಪ್ರಯತ್ನದಲ್ಲಿದ್ದೇನೆ ಎಂದು ಶೀರ್ಷಿಕೆ ನೀಡಿದ್ದಾರೆ.

https://www.instagram.com/p/CSoxbgurmrJ/?utm_source=ig_web_copy_link

https://www.instagram.com/p/CSunBngrc4z/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...