
ಮತದಾನ ಮಾಡಲು ಮತಗಟ್ಟೆ ಬಳಿ ಆರು ಗಂಟೆಗೂ ಹೆಚ್ಚು ಅವಧಿ ಕಾಯುವ ಮೂಲಕ ಭಾರೀ ಸುದ್ದಿ ಮಾಡಿದ್ದ ಅಮೆರಿಕದ ಹೂಸ್ಟನ್‌ನ ಮತದಾರನೊಬ್ಬ ಈಗ ಜೈಲಿನಲ್ಲಿದ್ದಾನೆ.
2020ರ ಅಧ್ಯಕ್ಷೀಯ ಚುನಾವಣೆ ನಡೆಯುವ ಸಂದರ್ಭ ಪೆರೋಲ್ ಮೇಲೆ ಇದ್ದ ಆತ ಮತದಾನ ಮಾಡುವುದು ಅಕ್ರಮವಾಗಿದ್ದ ಕಾರಣ ಹರ್ವಿಸ್ ರೋಜರ್ಸ್ ಇದೀಗ ಜೈಲುಪಾಲಾಗಿದ್ದಾನೆ.
ತರಬೇತಿ ವೇಳೆ ಲೈಂಗಿಕ ದೌರ್ಜನ್ಯ: ಕೋಚ್ ವಿರುದ್ಧ ದೂರುಗಳ ಸುರಿಮಳೆ
ಅಕ್ರಮ ಮತದಾನದ ಆಪಾದನೆ ಮೇಲೆ ಬಂಧಿತನಾಗಿರುವ ಈತನಿಗೆ 20 ವರ್ಷ ಜೈಲುವಾಸದ ಶಿಕ್ಷೆಯಾಗುವ ಸಾಧ್ಯತೆ ಇದೆ. 62 ವರ್ಷದ ರೋಜರ್ಸ್‌ನ ಜಾಮೀನಿಗೆ $100,000 ವಿಧಿಸಲಾಗಿದೆ.
ಡಕಾಯಿತಿಯ ಆರೋಪದ ಮೇಲೆ ಜೈಲು ಶಿಕ್ಷೆಯಲ್ಲಿದ್ದ ರೋಜರ್ಸ್ ಮತದಾನ ಮಾಡುವ ವೇಳೆ ಪೆರೋಲ್ ಮೇಲೆ ಇದ್ದ. ಟೆಕ್ಸಾಸ್ ಕಾನೂನಿನ ಪ್ರಕಾರ ಪೆರೋಲ್‌ನಲ್ಲಿರುವ ಮಂದಿಗೆ ಮತದಾನ ಹಕ್ಕನ್ನು ತಾತ್ಕಾಲಿಕವಾಗಿ ರದ್ದಿನಲ್ಲಿಡಲಾಗಿರುತ್ತದೆ.