ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ 17 ವರ್ಷಗಳ ಕಾಲ ಒಡೆತನ ಹೊಂದಿದ್ದ ಸ್ಯಾನ್ ಫ್ರಾನ್ಸಿಸ್ಕೋ ಮನೆಯನ್ನ ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಆಸ್ತಿಗೆ ಮಾರುಕಟ್ಟೆಯಲ್ಲಿ 7.9 ಲಕ್ಷ ಡಾಲರ್ ಮೌಲ್ಯ ಇದೆ ಎಂದು ಅಂದಾಜಿಸಲಾಗಿದೆ.
ಈ ಸ್ಯಾನ್ ಫ್ರಾನ್ಸಿಸ್ಕೋ ಮನೆ ಎತ್ತರದ ಮೇಲ್ಚಾವಣಿ, ಕಚೇರಿ ವ್ಯವಸ್ಥೆ, ಸಣ್ಣ ಹೊರಾಂಗಣ, ಮಲಗುವ ಕೋಣೆ, ಸ್ನಾನಗೃಹ ಸೇರಿದಂತೆ ಐಷಾರಾಮಿ ಸೌಲಭ್ಯಗಳನ್ನ ಹೊಂದಿದೆ.
RSS ಬಗ್ಗೆ ಟೀಕೆ, ದೇಶ ವಿರೋಧಿ ಹೇಳಿಕೆ: PFI ಸಂಘಟನೆ ನಾಯಕರಿಗೆ ಬಿಗ್ ಶಾಕ್
2004ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ ಜಿಲ್ಲಾ ವಕೀಲರಾಗಿದ್ದ ವೇಳೆ ಕಮಲಾ ಹ್ಯಾರಿಸ್ ಈ ಅಪಾರ್ಟ್ಮೆಂಟ್ನ್ನು 489000 ಡಾಲರ್ ಮೌಲ್ಯಕ್ಕೆ ಖರೀದಿ ಮಾಡಿದ್ದರು.
ಪ್ರಸ್ತುತ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬ್ಲೇರ್ ಹೌಸ್ನಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿದ್ದಾರೆ. ಇವರ ಅಧಿಕೃತ ನಿವಾಸ ಶ್ವೇತ ಭವನದ ಸಮೀಪದಲ್ಲೇ ಇದೆ.