ಅಮೆರಿಕದ ಬ್ರನ್ಸ್‌ವಿಕ್ ಕೌಂಟಿಯ ಹೋಪ್ ಚೆಸ್ಟ್ ಸ್ಟೋರ್‌ನ ಸಿಬ್ಬಂದಿಗೆ 150 ವರ್ಷ ಹಳೆಯ ಮದುವೆಯ ಪ್ರಮಾಣ ಪತ್ರವೊಂದು ಸಿಕ್ಕಿದ್ದು, ಅದರ ವಾರಸುದಾರರಿಗೆ ಹಿಂದಿರುಗಿಸುವ ಪ್ರಯತ್ನದಲ್ಲಿದ್ದಾರೆ.
ಹಳೆಯ ಆಂಟಿಕ್ ಪ್ರಿಂಟ್‌ಗಳನ್ನು ಸ್ವಚ್ಛಗೊಳಿಸುತ್ತಿದ್ದ ಸ್ಟೋರ್ ನೌಕರ ಪ್ಯಾನ್ ಫೆಲ್ಪ್ಸ್‌ಗೆ ಈ ಪ್ರಮಾಣ ಪತ್ರವು ಫ್ರೇಂನಲ್ಲಿ ಅಡಗಿದ್ದ ವೇಳೆ ಸಿಕ್ಕಿದೆ. ಈ ಫ್ರೇಂನಲ್ಲಿ 1889ನೇ ಇಸವಿಗೆ ಸೇರಿದ್ದ ಪ್ರಿಂಟ್ ಒಂದು ಇದ್ದು, ಕರಿ ನಾಯಿಯ ಕಾಲರ್‌ಗೆ ಪುಟಾಣಿ ಬಾಲೆಯೊಬ್ಬಳು ಹೂವು ಇಡುತ್ತಿರುವುದನ್ನು ನೋಡಬಹುದಾಗಿದೆ.
ದಂಗುಬಡಿಸುತ್ತೆ 100 ನೇ ಹುಟ್ಟುಹಬ್ಬದಂದು ವೃದ್ದೆ ಮಾಡಿದ ಕೆಲಸ
ಇದೇ ವೇಳೆ 1875ನೇ ಇಸವಿಯ ಏಪ್ರಿಲ್ 11ಕ್ಕೆ ಸೇರಿದ ಮದುವೆ ಪ್ರಮಾಣ ಪತ್ರವೂ ಸಿಕ್ಕಿದ್ದು – ನ್ಯೂಜೆರ್ಸಿಯ ವಿಲಿಯಂ ಹಾಗೂ ಕೇಟಿ ಎಂಬ ಜೋಡಿ ದಾಂಪತ್ಯಕ್ಕೆ ಕಾಲಿಟ್ಟ ಕ್ಷಣದ ಸಾಕ್ಷಿ ಇದಾಗಿದೆ.
ಈ ಪ್ರಮಾಣ ಪತ್ರದಲ್ಲಿರುವ ಜೋಡಿಯ ಬಂಧುಗಳ ತಲಾಶೆಯಲ್ಲಿರುವ ಸ್ಟೋರ್‌ನ ನಿರ್ದೇಶಕ ಕರ್ಮೆನ್ ಸ್ಮಿತ್ ಸಾಮಾಜಿಕ ಜಾಲತಾಣದ ತಮ್ಮ ಪೇಜ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
https://www.facebook.com/KarmenCaroline/posts/10157556687381377