alex Certify BREAKING: ರಷ್ಯಾಗೆ ತಿರುಗೇಟು ನೀಡ್ತಿರುವ ಉಕ್ರೇನ್ ಗೆ ಮತ್ತಷ್ಟು ಬಲ, ಯುದ್ಧೋಪಕರಣ ಖರೀದಿಗೆ ಅಮೆರಿಕ ನೆರವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ರಷ್ಯಾಗೆ ತಿರುಗೇಟು ನೀಡ್ತಿರುವ ಉಕ್ರೇನ್ ಗೆ ಮತ್ತಷ್ಟು ಬಲ, ಯುದ್ಧೋಪಕರಣ ಖರೀದಿಗೆ ಅಮೆರಿಕ ನೆರವು

ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆದಿದೆ. ಸಂಕಷ್ಟದಲ್ಲಿ ಸಿಲುಕಿರುವ ಉಕ್ರೇನ್ ಗೆಅಮೆರಿಕ ನೆರವಿನ ಹಸ್ತ ಚಾಚಿದೆ.

ಉಕ್ರೇನ್ ನ ಕೆಲವು ನಗರಗಳಲ್ಲಿ ಪರಿಸ್ಥಿತಿ ಭೀಕರವಾಗಿದೆ. 18 ದಿನಗಳಿಂದ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆಯಲ್ಲಿ ನಿನ್ನೆ ಉಕ್ರೇನ್ ಕೆಲವು ನಗರಗಳಿಂದ 13,000 ನಾಗರಿಕರನ್ನು ಸ್ಥಳಾಂತರ ಮಾಡಲಾಗಿದೆ.

ಉಕ್ರೇನ್ ಗೆ ಅಮೆರಿಕ ಹೆಚ್ಚುವರಿಯಾಗಿ 200 ಮಿಲಿಯನ್ ಡಾಲರ್ ನೆರವು ನೀಡಲಿದೆ. ರಕ್ಷಣಾ ಉಪಕರಣಗಳ ಖರೀದಿಗೆ ಅಮೆರಿಕ ನೆರವು ನೀಡಲಿದೆ. ಜನವರಿ 21 ರಿಂದ ಇದುವರೆಗೆ 1.2 ಬಿಲಿಯನ್ ಡಾಲರ್ ನೆರವು ನೀಡಲಾಗಿದೆ. ಇದರೊಂದಿಗೆ ಹೆಚ್ಚುವರಿ ನೆರವು ನೀಡಲಾಗುವುದು ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...