ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆದಿದೆ. ಸಂಕಷ್ಟದಲ್ಲಿ ಸಿಲುಕಿರುವ ಉಕ್ರೇನ್ ಗೆಅಮೆರಿಕ ನೆರವಿನ ಹಸ್ತ ಚಾಚಿದೆ.
ಉಕ್ರೇನ್ ನ ಕೆಲವು ನಗರಗಳಲ್ಲಿ ಪರಿಸ್ಥಿತಿ ಭೀಕರವಾಗಿದೆ. 18 ದಿನಗಳಿಂದ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆಯಲ್ಲಿ ನಿನ್ನೆ ಉಕ್ರೇನ್ ಕೆಲವು ನಗರಗಳಿಂದ 13,000 ನಾಗರಿಕರನ್ನು ಸ್ಥಳಾಂತರ ಮಾಡಲಾಗಿದೆ.
ಉಕ್ರೇನ್ ಗೆ ಅಮೆರಿಕ ಹೆಚ್ಚುವರಿಯಾಗಿ 200 ಮಿಲಿಯನ್ ಡಾಲರ್ ನೆರವು ನೀಡಲಿದೆ. ರಕ್ಷಣಾ ಉಪಕರಣಗಳ ಖರೀದಿಗೆ ಅಮೆರಿಕ ನೆರವು ನೀಡಲಿದೆ. ಜನವರಿ 21 ರಿಂದ ಇದುವರೆಗೆ 1.2 ಬಿಲಿಯನ್ ಡಾಲರ್ ನೆರವು ನೀಡಲಾಗಿದೆ. ಇದರೊಂದಿಗೆ ಹೆಚ್ಚುವರಿ ನೆರವು ನೀಡಲಾಗುವುದು ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮಾಹಿತಿ ನೀಡಿದ್ದಾರೆ.