alex Certify ʼನಿಗೂಢ ವಸ್ತುʼವಿನ ಹಾರಾಟದ ಕುರಿತು ಮತ್ತೊಂದು ಮಹತ್ವದ ಮಾಹಿತಿ ಬಹಿರಂಗ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನಿಗೂಢ ವಸ್ತುʼವಿನ ಹಾರಾಟದ ಕುರಿತು ಮತ್ತೊಂದು ಮಹತ್ವದ ಮಾಹಿತಿ ಬಹಿರಂಗ…!

ಅಮೆರಿಕದ ನೌಕಾನೆಲೆಯ ಪೈಲಟ್​ಗಳು ಗುರುತಿಸಿದ ವೈಮಾನಿಕ ದೃಶ್ಯ ಸ್ಪೇಸ್​ಕ್ರಾಫ್ಟ್​ನದ್ದು ಎಂದು ಹೇಳುವಂತಹ ಮಾತಿಗೆ ಯಾವುದೇ ಪುರಾವೆಗಳು ಇಲ್ಲಿಯವರೆಗೂ ದೊರಕಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಅಲ್ಲದೇ ಅಮೆರಿಕ ಗುಪ್ತಚರ ಇಲಾಖೆ ಕೂಡ ಪೈಲಟ್​​ಗಳು ನೋಡಿದ ವೈಮಾನಿಕ ದೃಶ್ಯಕ್ಕೆ ನಮ್ಮ ಬಳಿ ಯಾವುದೇ ವಿವರಣೆ ಇಲ್ಲ ಎಂದು ಹೇಳಿದ್ದಾರೆ.

ಈ ಅಪರಿಚಿತ ಹಾರುವ ವಸ್ತುವಿನ ಬಗ್ಗೆ ಇನ್ನೂ ಪ್ರಕಟವಾಗದ ಅಮೆರಿಕ ಸರ್ಕಾರದ ವರದಿಯನ್ನ ನ್ಯೂಯಾರ್ಕ್ ಟೈಮ್ಸ್​ ವರದಿ ಮಾಡಿದೆ. ಅಮೆರಿಕ ಮಿಲಿಟರಿ ಪಡೆ ಇದೀಗ ಈ ವಸ್ತುಗಳಿಗೆ ಗುರುತಿಸಲಾಗದ ವೈಮಾನಿಕ ವಿದ್ಯಮಾನ ಎಂದು ಹೆಸರು ನೀಡಿದೆ.

ಸರ್ಕಾರದ ವರದಿಯ ಬಗ್ಗೆ ಮಾಹಿತಿ ಇರುವ ಅಮೆರಿಕದ ಅಧಿಕಾರಿಗಳು ಈ ವಸ್ತು ಅಮೆರಿಕ ಮಿಲಿಟರಿ ಏರ್​ಕ್ರಾಫ್ಟ್​ ಅಥವಾ ಅಮೆರಿಕದ ಇತರೆ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನಕ್ಕೆ ಸೇರಿದ್ದಲ್ಲ ಎಂದು ದೃಢೀಕರಿಸಿದ್ದಾರೆ.

2019ರ ಜುಲೈ ತಿಂಗಳಲ್ಲಿ ತೆಗೆದ ವಿಡಿಯೋ ಇದಾಗಿದ್ದು ಸ್ಯಾನ್​ಡಿಯಾಗೋದ ಕರಾವಳಿಯ ಒಮಾಹದಲ್ಲಿದ್ದ ಯುದ್ಧ ಮಾಹಿತಿ ಕೇಂದ್ರದಲ್ಲಿ ನೌಕಾಪಡೆ ಹಡಗಿನ ಸಮೀಪ ಹಾರುತ್ತಿದ್ದ ಯುಎಫ್​ಓವನ್ನ ಪತ್ತೆ ಮಾಡಲಾಗಿತ್ತು. ಈ ವಿಡಿಯೋವನ್ನ ಮೇ 14ರಂದು ನಿರ್ದೇಶಕ ಜೆರೆಮಿ ಕಾರ್ಬೆಲ್​ ಟ್ವಿಟರ್​ನಲ್ಲಿ ಶೇರ್​ ಮಾಡಿದ ಬಳಿಕ ವೈರಲ್​ ಆಗಿತ್ತು.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...