alex Certify ಮಹಿಳೆಯರನ್ನು ಇಂಜಿನಿಯರಿಂಗ್/ವೈದ್ಯಕೀಯ ವೃತ್ತಿಗಳಿಗೆ ನೇಮಕ ಮಾಡೋದ್ರಲ್ಲಿ ಅರ್ಥವಿಲ್ಲ ಎಂದ ಪ್ರೊಫೆಸರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರನ್ನು ಇಂಜಿನಿಯರಿಂಗ್/ವೈದ್ಯಕೀಯ ವೃತ್ತಿಗಳಿಗೆ ನೇಮಕ ಮಾಡೋದ್ರಲ್ಲಿ ಅರ್ಥವಿಲ್ಲ ಎಂದ ಪ್ರೊಫೆಸರ್‌

ಮಹಿಳೆಯರನ್ನು ಕಾನೂನು, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವೃತ್ತಿಗಳಲ್ಲಿ ಸೇರಿಸಿಕೊಳ್ಳುವ ಕುರಿತು ಅಮೆರಿಕ ವಿವಿಯೊಂದರ ಪ್ರಾಧ್ಯಾಪಕರು ಕೊಟ್ಟ ಹೇಳಿಕೆಯೊಂದು ವಿಪರೀತ ಅರ್ಥಗಳಿಗೆ ಗ್ರಾಸವಾಗಿಬಿಟ್ಟಿದೆ.

ಇಡಾಹೋದಲ್ಲಿರುವ ಬೋಯ್ಸ್‌ ಸ್ಟೇಟ್ ವಿವಿಯಲ್ಲಿ ರಾಜಕೀಯ ವಿಜ್ಞಾನದ ಪ್ರಾಧ್ಯಾಪಕರಾದ ಸ್ಕಾಟ್ ಯೆನೋರ್‌, ಫ್ಲಾರಿಡಾದ ಓರ್ಲಾಂಡೋದಲ್ಲಿ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಲೆಕ್ಚರ್‌ ನೀಡುತ್ತಿದ್ದ ವೇಳೆ ಮಾತನಾಡುತ್ತಾ, “ಇಂಜಿನಿಯರಿಂಗ್‌ನಲ್ಲಿ ಮಹಿಳೆಯರನ್ನು ಸೇರಿಸದೇ ಇರಲು ಸಾಧ್ಯವಿರುವ ಎಲ್ಲಾ ಯತ್ನಗಳನ್ನು ಮಾಡಬೇಕು, ಬದಲಾಗಿ ಪುರುಷರನ್ನು ನೇಮಕ ಮಾಡಿಕೊಳ್ಳಬೇಕು. ವೈದ್ಯಕೀಯ, ಕಾನೂನು ಹಾಗೂ ಪ್ರತಿಯೊಂದು ವ್ಯವಹಾರಕ್ಕೂ ಇದನ್ನೇ ಅನುಸರಿಸಬೇಕು,” ಎಂದಿದ್ದರು.

ಅಧ್ಯಯನದಲ್ಲಿ ಬಯಲಾಯ್ತು ಥೈರಾಯ್ಡ್​​ ಸಮಸ್ಯೆ ಕುರಿತಾದ ಬೆಚ್ಚಿ ಬೀಳಿಸುವ ಅಂಶ

ತಮ್ಮ ಹೇಳಿಕೆಗೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಲೇ ಅದಕ್ಕೆ ಸಮರ್ಥನೆ ಕೊಟ್ಟ ಯೇನರ್‌, “ಮಹಿಳೆಯರಿಗೆ ಇಷ್ಟವಿಲ್ಲದೇ ಇರುವ ವೃತ್ತಿಗಳಿಗೆ ನೇಮಕ ಮಾಡಲು ವಿಶೇಷ ಪ್ರಯತ್ನಗಳನ್ನು ಬಿಡಬೇಕು ಎಂದು ನಾನು ವಾದಿಸಿದಾಗ, ಈ ವೃತ್ತಿಗಳಿಂದ ಮಹಿಳೆಯರನ್ನು ಆಚೆ ಇಡಲು ಹಾಗೂ ಅವರಿಗೆ ಈ ವಿಷಯಗಳಲ್ಲಿ ಶಿಕ್ಷಣ ನೀಡಲು ಬೇಡವೆಂದು ಹೇಳಿದೆ ಎಂದು ನನ್ನ ಮೇಲೆ ಆಪಾದನೆ ಮಾಡಲಾಗುತ್ತಿದೆ,’’ ಎಂದಿದ್ದಾರೆ.

ಮಹಿಳೆಯರಿಗೆ ಸ್ವಾಭಾವಿಕವಾಗಿ ಇಂಜಿಯರರಾಗಲು ಇಷ್ಟವಿಲ್ಲದೇ ಇದ್ದರೂ ಅವರನ್ನು ಈ ಕ್ಷೇತ್ರದಲ್ಲಿ ನೇಮಕ ಮಾಡಲಾಗುತ್ತಿದೆ ಎಂಬುದು ಯೇನರ್‌ ಮಾತಿನ ಸಾರವಾಗಿದೆ.

ಅದೇನೇ ಇರಲಿ, ಯೇನರ್‌‌ರ ಈ ಅಭಿ‌ಪ್ರಾಯ ಟ್ವಿಟರ್‌ನಲ್ಲಿ ಒಂದೊಳ್ಳೆ ವಾಕ್ಸಮರಕ್ಕೆ ಕಾರಣವಾಗಿದ್ದು, ವಿರೋಧದ ಹೇಳಿಕೆಗಳೇ ಹೆಚ್ಚಾಗಿ ಬರುತ್ತಿವೆ.

“ಮಹಿಳೆಯರು ಗಣಿತ ಹಾಗೂ ವಿಜ್ಞಾನದಲ್ಲಿ ಉತ್ತಮರಲ್ಲ ಎಂದು ನಂಬಿಕೊಳ್ಳುವಂತೆ ಮಾಡಿದ ಸಂಸ್ಕೃತಿ/ಶಿಕ್ಷಣ ನಮ್ಮದಾಗಿತ್ತು, ಆದರೆ ಮಹಿಳೆಯರು ಈ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ ಎಂದು ನಾವು ಅರಿತ ಬಳಿಕ ಅವರಿಗೆ ನಾವು ಬೆಂಬಲಿಸಬೇಕಲ್ಲವೇ?” ಎಂದು ಟ್ವಿಟರ್‌ ಬಳಕೆದಾರರೊಬ್ಬರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...