alex Certify ಅಧ್ಯಯನದಲ್ಲಿ ಬಯಲಾಯ್ತು ಥೈರಾಯ್ಡ್​​ ಸಮಸ್ಯೆ ಕುರಿತಾದ ಬೆಚ್ಚಿ ಬೀಳಿಸುವ ಅಂಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಧ್ಯಯನದಲ್ಲಿ ಬಯಲಾಯ್ತು ಥೈರಾಯ್ಡ್​​ ಸಮಸ್ಯೆ ಕುರಿತಾದ ಬೆಚ್ಚಿ ಬೀಳಿಸುವ ಅಂಶ

ಥೈರಾಯ್ಡ್​​ ಕ್ಯಾನ್ಸರ್​​ ತಡೆಗಟ್ಟಬೇಕು ಅಂದರೆ ಸ್ಥೂಲಕಾಯವನ್ನು ಕಡಿಮೆ ಮಾಡಿಕೊಳ್ಳಲೇಬೇಕೆಂದು ಹೊಸ ಅಧ್ಯಯನವೊಂದು ಹೇಳಿದೆ. ಇಂಟರ್​ನ್ಯಾಷನಲ್​ ಜರ್ನಲ್​ ಆಫ್​ ಕ್ಯಾನ್ಸರ್​​ನಲ್ಲಿ ಈ ವರದಿಯನ್ನು ಪ್ರಕಟಿಸಲಾಗಿದೆ.

ಯುಎನ್​​ಎಸ್​ಡಬ್ಲು ಸ್ಕೂಲ್​​ನ ಡಾ. ಮಾರಿಟ್​ ಲಾಕ್ಸೊನೆನ್​ ನೇತೃತ್ವದಲ್ಲಿ ನಡೆಸಲಾದ ವಿಶ್ವದ ಮೊದಲ ಅಧ್ಯಯನದಲ್ಲಿ ಆಸ್ಟ್ರೇಲಿಯಾವು ಸ್ಥೂಲಕಾಯದಿಂದಲೇ ಥೈರಾಯ್ಡ್​ ಕ್ಯಾನ್ಸರ್​ ಬರುತ್ತದೆ ಎಂದು ಕಂಡು ಹಿಡಿಯಲಾಗಿದೆ.

ಡೇಟಾ ಸೈನ್ಸ್​ನ ಹಿರಿಯ ಉಪನ್ಯಾಸಕ ಡಾ. ಲಾಕ್ಸೋನೆನ್​​ ಕಳೆದ 2 ದಶಕಗಳಲ್ಲಿ ಆಸ್ಟ್ರೇಲಿಯಾದಲ್ಲಿ ಸ್ಥೂಲಕಾಯ ಇರುವವರ ಸಂಖ್ಯೆಯು ದ್ವಿಗುಣಗೊಂಡಿದೆ. ಆಸ್ಟ್ರೇಲಿಯಾದಲ್ಲಿ 75 ಪ್ರತಿಶತ ಪುರುಷರು ಹಾಗೂ 60 ಪ್ರತಿಶತದಷ್ಟು ಮಹಿಳೆಯರು ಅಧಿಕ ತೂಕ ಅಥವಾ ಸ್ಥೂಲಕಾಯದ ಸಮಸ್ಯೆ ಹೊಂದಿದ್ದಾರೆ ಎಂದು ಹೇಳಿದರು.

ಈ ಸಂಶೋಧನೆಯು ಮುಂದಿನ 10 ವರ್ಷಗಳಲ್ಲಿ ಸುಮಾರು 10 ಸಾವಿರ ಥೈರಾಯ್ಡ್​​ ಕ್ಯಾನ್ಸರ್​ ರೋಗಿಗಳು ಇರಬಹುದು ಎಂದು ಅಂದಾಜಿಸಿದೆ ಎಂದು ಡಾ. ಲಾಕ್ಸೋನೆನ್​ ಹೇಳಿದ್ದಾರೆ.

ಇಂಟರ್​ನ್ಯಾಷನಲ್​ ಏಜನ್ಸಿ ಫಾರ್​ ರಿಸರ್ಚ್​ ಆನ್​ ಕ್ಯಾನ್ಸರ್​ ನಡೆಸಿದ ಅಧ್ಯಯನದಲ್ಲಿ ಅತಿಯಾದ ಬೊಜ್ಜು ಕ್ಯಾನ್ಸರ್​ಗೆ ಮುಖ್ಯ ಕಾರಣವಾಗಿದೆ ಎಂದು ಹೇಳಿದೆ.
ಕ್ಯಾನ್ಸರ್ ಸಂಶೋಧನೆಯ ಮುಖ್ಯ ಪ್ರಾಧಿಕಾರ, ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್, ದೇಹದ ಬೊಜ್ಜು ಥೈರಾಯ್ಡ್ ಕ್ಯಾನ್ಸರ್ಗೆ ಕಾರಣವಾಗುವ ಅಪಾಯಕಾರಿ ಅಂಶವಾಗಿದೆ ಎಂದು ತೀರ್ಮಾನಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...