alex Certify ಈಗಾಗಲೇ 14 ಬಾರಿ ಗರ್ಭಿಣಿಯಾಗಿ ಮಕ್ಕಳನ್ನು ಹೆತ್ತಾಕೆ ಈಗ ಮತ್ತೊಂದು ಮಗು ಹೆರಲು ರೆಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಗಾಗಲೇ 14 ಬಾರಿ ಗರ್ಭಿಣಿಯಾಗಿ ಮಕ್ಕಳನ್ನು ಹೆತ್ತಾಕೆ ಈಗ ಮತ್ತೊಂದು ಮಗು ಹೆರಲು ರೆಡಿ

40 ವರ್ಷದ ಮಹಿಳೆ ಇತ್ತೀಚೆಗೆ ತನ್ನ ಹದಿನಾರನೇ ಮಗುವಿಗೆ ಜನ್ಮ ನೀಡಿದ ಸುಮಾರು ಒಂದು ವರ್ಷದ ನಂತರ ತಾನು ಮತ್ತೊಂದು ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾಳೆ.

ಅಚ್ಚರಿಯಾಯಿತೇ? ಆಗಲೇ ಬೇಕಲ್ಲ. ಮಕ್ಕಳೇ ಬೇಡ ಎನ್ನುವ ಈ ಸಂದರ್ಭದಲ್ಲಿ ಇಲ್ಲೊಬ್ಬಳು ಮಹಿಳೆ 17ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಅಮೆರಿಕದ ಉತ್ತರ ಕೆರೊಲಿನಾದ ನಿವಾಸಿ ಪ್ಯಾಟಿ ಹೆರ್ನಾಂಡೆಜ್​ ಹದಿನಾರು ಮಕ್ಕಳ ತಾಯಿಯಾಗಿದ್ದು ಮತ್ತೆ ಗರ್ಭಿಣಿಯಾಗಿದ್ದಾಳೆ.

ಆಕೆಯ ಪತಿ 39 ವರ್ಷದ ಕಾರ್ಲೋಸ್ ಕ್ಲೀನಿಂಗ್​ ಕಂಪನಿ ನಡೆಸುತ್ತಾರೆ. ಆತ ತನ್ನ ತಂದೆಯ ಗೌರವಾರ್ಥ ಎಲ್ಲಾ ಮಕ್ಕಳ ಹೆಸರನ್ನು ‘ಸಿ’ ಅಕ್ಷರದಿಂದ ಕರೆಯುತ್ತಾರೆ. ದಂಪತಿಗೆ ಆರು ಗಂಡು ಮತ್ತು ಹತ್ತು ಹೆಣ್ಣು ಮಕ್ಕಳಿದ್ದು, ಅವರಲ್ಲಿ ಮೂರು ಜೋಡಿ ಅವಳಿ ಮಕ್ಕಳಿದ್ದಾರೆ.

ಕಾರ್ಲೋಸ್ ಜೂನಿಯರ್​ (14), ಕ್ರಿಸ್ಟೋಫರ್​ (13), ಕಾರ್ಲಾ (11), ಕೈಟ್ಲಿನ್​ (11 ) ಕ್ರಿಸ್ಟಿಯನ್​ (10), ಸೆಲೆಸ್ಟ್​ (10), ಕ್ರಿಸ್ಟಿನಾ (9), ಕ್ಯಾಲ್ವಿನ್​ (7), ಕ್ಯಾಥರೀನ್​ (7), ಕ್ಯಾಲೆಬ್​ (5), ಕ್ಯಾರೋಲಿನ್​ (5), ಕ್ಯಾಮಿಲ್ಲಾ (4), ಕ್ಯಾರೊಲ್​ (4) ಷಾರ್ಲೆಟ್​ (3) ಮತ್ತು ಕ್ರಿಸ್ಟಲ್​ (2). ಕ್ಲೇಟನ್​ ಕಳೆದ ವರ್ಷ ಜನಿಸಿದ ಅವರ ಕಿರಿಯ ಮಗು. ಇದೀಗ ಈ ಜೋಡಿ ಮತ್ತೆ ಒಂದು ಮಗುವಿನ ನಿರೀಕ್ಷೆಯಲ್ಲಿದೆ.

ನಾನು 14 ವರ್ಷಗಳಿಂದ ಗರ್ಭಿಣಿಯಾಗಿದ್ದೇನೆ. ನನ್ನ 17ನೇ ಮಗುವನ್ನು ಉತ್ಸುಕತೆಯಿಂದ ಎದುರು ನೋಡುತ್ತಿದ್ದೇನೆ ಪಾಟಿ ಹೇಳಿಕೊಂಡಿದ್ದಾರೆ. ದಂಪತಿಗಳ ಪ್ರಕಾರ, ಅವರು ಗರ್ಭನಿರೋಧಕ ಬಳಸುವುದನ್ನು ನಂಬುವುದಿಲ್ಲ. ನಾನು ಎಲ್ಲವನ್ನೂ ದೇವರಿಗೆ ಬಿಡುತ್ತೇನೆ. ನಾವು ಮತ್ತೆ ಗರ್ಭಿಣಿಯಾಗಬೇಕೆಂದು ಅವನು ಬಯಸಿದರೆ, ಆಗಲಿ ಎಂದು ಆಕೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಈ ದಂಪತಿ ಐದು ಬೆಡ್​ರೂಮ್​ಗಳ ಮನೆಯನ್ನು ಹೊಂದಿದ್ದು, ಮಕ್ಕಳಿಗಾಗಿ ಹಲವಾರು ಬಂಕ್​ ಹಾಸಿಗೆ ಮತ್ತು ಶೆಡ್​ ಹೊಂದಿದ್ದಾರೆ. ಪ್ಯಾಟಿ 20-ಆಸನಗಳ ಬಸ್​ ಅನ್ನು ಓಡಿಸುತ್ತಾಳೆ, ಅದನ್ನು ಆಕೆ ತನ್ನ ಮಕ್ಕಳೊಂದಿಗೆ ಸುತ್ತಲು ಮತ್ತು ಶಾಲೆಗೆ ಕರೆದೊಯ್ಯಲು ಬಳಸುತ್ತಾಳೆ.

ದಂಪತಿ ಆಹಾರಕ್ಕಾಗಿ ವಾರಕ್ಕೆ ಸುಮಾರು 72,000 ರೂಪಾಯಿಯಷ್ಟು ಖರ್ಚು ಮಾಡುತ್ತಾರೆ ಎಂಬ ಸಂಗತಿಯನ್ನೂ ಬಹಿರಂಗಪಡಿಸಿದ್ದಾರೆ. ಗಟ್ಟಿಮುಟ್ಟಾದ ಜೋಡಿಯು- 10 ಹುಡುಗರು ಮತ್ತು 10 ಹುಡುಗಿಯರನ್ನು ಹೊಂದುವವರೆಗೆ ತಮ್ಮ ಪ್ರಯತ್ನ ನಿಲ್ಲಿಸಲು ಯೋಜಿಸುವುದಿಲ್ಲ ಎಂದಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...