ಅಪಾಯಕಾರಿ ಪ್ರಾಣಿಗಳ ವಿಷಯದಲ್ಲಿ ಸಾಹಸ ಮಾಡುವವರ ಸಂಖ್ಯೆಗೇನು ಕೊರತೆ ಇಲ್ಲ. ಇಂತವರು ತಮ್ಮ ಪ್ರಾಣ ಪಣಕ್ಕಿಟ್ಟು ಕುತೂಹಲದ ವಿಚಾರಗಳನ್ನು ಜಗತ್ತಿಗೆ ತಿಳಿಸುವ ಪ್ರಯತ್ನ ಮಾಡಿ ಖುಷಿಪಟ್ಟುಕೊಳ್ಳುತ್ತಾರೆ.
ಯುಎಸ್‌ನ ಟೆಕ್ಸಾಸ್ ನಲ್ಲಿ ಈ ವರ್ಷದ ಬೇಟೆಯ ಸೀಸನ್‌ನಲ್ಲಿ 14 ಅಡಿಯ ಜೀವಮಾನದಲ್ಲಿ ಒಮ್ಮೆ ಮಾತ್ರ ಸಿಗಬಹುದಾದ ಮೊಸಳೆಯನ್ನು ಬೇಟೆಯಾಡಿದ್ದಾರೆ.
ಬೇಟೆಗಾರರು ಸತ್ತ ಅಲಿಗೇಟರ್‌ನೊಂದಿಗೆ ಪೋಸ್ ನೀಡುತ್ತಿರುವ ಫೋಟೋವನ್ನು ಜೇಮ್ಸ್ ಇ. ಡಾಟ್ರಿ ವೈಲ್ಡ್‌ಲೈಫ್ ಮ್ಯಾನೇಜ್‌ಮೆಂಟ್ ಏರಿಯಾದ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ.
ದೈತ್ಯ ಮೊಸಳೆಯ ಬಾಯಿಗೆ ಮರದ ಕೋಲಿನಿಂದ ಕಟ್ಟಲಾಗಿರುವುದು ಫೋಟೋದಲ್ಲಿ ನೋಡಬಹುದು.
ಅಲಿಗೇಟರ್‌ನ ಮಾಹಿತಿಯನ್ನೂ ವಿವರಿಸಲಾಗಿದೆ. ಅದು 781 ಪೌಂಡ್ ತೂಕದ ಗಂಡು ಅಲಿಗೇಟರ್ ಆಗಿದ್ದು 14ಅಡಿ ಉದ್ದ 2.5 ಅಡಿ ಅಗಲವಿದೆ. ಈ ಪೋಸ್ಟ್‌ಗೆ ಫೇಸ್‌ಬುಕ್ ಬಳಕೆದಾರರು ತಮಾಷೆಯ ಕಾಮೆಂಟ್ ಮಾಡಿದ್ದಾರೆ.