alex Certify ಅಪರೂಪದ ಬಣ್ಣ‌ ಹೊಂದಿರುವ ಮೀನು ಪತ್ತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಬಣ್ಣ‌ ಹೊಂದಿರುವ ಮೀನು ಪತ್ತೆ…!

ಸಮುದ್ರದ ಒಡಲಲ್ಲಿ ಇನ್ನೂ ಪತ್ತೆ ಮಾಡದ ಸಾಕಷ್ಟು ಜಲಚರಗಳು ಇವೆ. ಹೀಗಾಗಿ ಅಪರೂಪದ ಪ್ರಭೇದಗಳನ್ನ ಕಂಡಾಗೆಲ್ಲ ಆಶ್ಚರ್ಯ ಎನಿಸೋದು ಸಹಜ. ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಅರ್ಕಾನ್ಸನ್​ ಪ್ರಜೆ ನದಿಯಲ್ಲಿ ಮೀನು ಹಿಡಿಯುತ್ತಿದ್ದ ವೇಳೆ ವಿಶೇಷವಾದ ಮೀನೊಂದನ್ನ ಪತ್ತೆ ಮಾಡಿದ್ದಾರೆ.

ಲಾರ್ಜ್​ ಮೌತ್​ ಬಾಸ್​ ಮೀನು ಸಾಮಾನ್ಯವಾಗಿ ಕಂದು ಹಾಗೂ ಹಸಿರು ಬಣ್ಣದಲ್ಲಿ ಇರುತ್ತೆ. ಆದರೆ ಈ ಮೀನು ಬಂಗಾರದ ಬಣ್ಣದಲ್ಲಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ಮಣ್ಣು ಮೈಗೆ ಅಂಟಿದ್ದರಿಂದ ಇದು ಈ ರೀತಿ ಬೇರೆ ಬಣ್ಣದಲ್ಲಿ ಕಾಣಿಸುತ್ತಿದೆ ಎಂದು ಮೊದಲು ಭಾವಿಸಲಾಗಿತ್ತು.

ಬಳಿಕ ಅದು ನಿಜವಾಗಿಯೂ ಬಂಗಾರದ ಬಣ್ಣದಲ್ಲಿದ್ದನ್ನೇ ಕಂಡು ಮೀನಿಗೆ ಅನಾರೋಗ್ಯ ಇರಬಹುದು ಎಂದು ಅಂದಾಜಿಸಿದ್ದಾರೆ. ಅಲ್ಲದೇ ಅದು ಚರ್ಮದ ಬಣ್ಣ ಹಳದಿಗೆ ತಿರುಗುವಂತಹ ಯಾವುದೇ ಆಹಾರವನ್ನೂ ಸೇವಿಸಿಲ್ಲ. ಸಾಕಷ್ಟು ಪರಿಶೀಲನೆಯ ಬಳಿಕ ಇದು ನೈಸರ್ಗಿಕವಾಗಿಯೇ ಬಂಗಾರದ ಬಣ್ಣ ಹೊಂದಿದೆ ಎಂದು ತಿಳಿದುಬಂದಿದೆ.

Bentonville angler lands rare ‘golden’ largemouth bassBENTONVILLE – Josh Rogers never had a doubt he had caught a…

Posted by Arkansas Game and Fish Commission on Wednesday, May 26, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...