ಸಮುದ್ರದ ಒಡಲಲ್ಲಿ ಇನ್ನೂ ಪತ್ತೆ ಮಾಡದ ಸಾಕಷ್ಟು ಜಲಚರಗಳು ಇವೆ. ಹೀಗಾಗಿ ಅಪರೂಪದ ಪ್ರಭೇದಗಳನ್ನ ಕಂಡಾಗೆಲ್ಲ ಆಶ್ಚರ್ಯ ಎನಿಸೋದು ಸಹಜ. ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಅರ್ಕಾನ್ಸನ್ ಪ್ರಜೆ ನದಿಯಲ್ಲಿ ಮೀನು ಹಿಡಿಯುತ್ತಿದ್ದ ವೇಳೆ ವಿಶೇಷವಾದ ಮೀನೊಂದನ್ನ ಪತ್ತೆ ಮಾಡಿದ್ದಾರೆ.
ಲಾರ್ಜ್ ಮೌತ್ ಬಾಸ್ ಮೀನು ಸಾಮಾನ್ಯವಾಗಿ ಕಂದು ಹಾಗೂ ಹಸಿರು ಬಣ್ಣದಲ್ಲಿ ಇರುತ್ತೆ. ಆದರೆ ಈ ಮೀನು ಬಂಗಾರದ ಬಣ್ಣದಲ್ಲಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ಮಣ್ಣು ಮೈಗೆ ಅಂಟಿದ್ದರಿಂದ ಇದು ಈ ರೀತಿ ಬೇರೆ ಬಣ್ಣದಲ್ಲಿ ಕಾಣಿಸುತ್ತಿದೆ ಎಂದು ಮೊದಲು ಭಾವಿಸಲಾಗಿತ್ತು.
ಬಳಿಕ ಅದು ನಿಜವಾಗಿಯೂ ಬಂಗಾರದ ಬಣ್ಣದಲ್ಲಿದ್ದನ್ನೇ ಕಂಡು ಮೀನಿಗೆ ಅನಾರೋಗ್ಯ ಇರಬಹುದು ಎಂದು ಅಂದಾಜಿಸಿದ್ದಾರೆ. ಅಲ್ಲದೇ ಅದು ಚರ್ಮದ ಬಣ್ಣ ಹಳದಿಗೆ ತಿರುಗುವಂತಹ ಯಾವುದೇ ಆಹಾರವನ್ನೂ ಸೇವಿಸಿಲ್ಲ. ಸಾಕಷ್ಟು ಪರಿಶೀಲನೆಯ ಬಳಿಕ ಇದು ನೈಸರ್ಗಿಕವಾಗಿಯೇ ಬಂಗಾರದ ಬಣ್ಣ ಹೊಂದಿದೆ ಎಂದು ತಿಳಿದುಬಂದಿದೆ.
https://www.facebook.com/ARGameandFish/posts/10159441642243234