alex Certify BIG SHOCK: ಕೊರೊನಾ ಸೋಂಕಿತನಿಗೆ 22 ಕೋಟಿ ರೂಪಾಯಿ ಬಿಲ್​ ನೀಡಿದೆ ಈ ಆಸ್ಪತ್ರೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCK: ಕೊರೊನಾ ಸೋಂಕಿತನಿಗೆ 22 ಕೋಟಿ ರೂಪಾಯಿ ಬಿಲ್​ ನೀಡಿದೆ ಈ ಆಸ್ಪತ್ರೆ…!

ಕೊರೊನಾ ವೈರಸ್​ ಸೋಂಕಿನಿಂದಾಗಿ ನಾಲ್ಕು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ರೋಗಿಯೊಬ್ಬ ಆಸ್ಪತ್ರೆ ಬಿಲ್​ನ್ನು ಟಿಕ್​ಟಾಕ್​ನಲ್ಲಿ ವಿಡಿಯೋ ಮೂಲಕ ಶೇರ್​ ಮಾಡಿದ್ದು ಇದನ್ನ ನೋಡಿದ ನೆಟ್ಟಿಗರು ದಂಗಾಗಿ ಹೋಗಿದ್ದಾರೆ. ಸೋಂಕಿನ ವಿರುದ್ಧ ಚಿಕಿತ್ಸೆ ಪಡೆದ ವ್ಯಕ್ತಿಗೆ ಆಸ್ಪತ್ರೆ ಆಡಳಿತ ಮಂಡಳಿ ಬರೋಬ್ಬರಿ 22 ಕೋಟಿ ರೂಪಾಯಿ ಬಿಲ್​ ಮಾಡಿದೆ.

ಟಿಕ್​ಟಾಕ್​ನಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ ವ್ಯಕ್ತಿಯು ಬಿಲ್​​ನ್ನು ಪ್ರದರ್ಶಿಸಿದ್ದಾನೆ. ಇದರಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ರೋಗಿಗೆ ನೀಡಿದ ಸಂಪೂರ್ಣ ಸೌಲಭ್ಯಗಳ ಪಟ್ಟಿಯನ್ನ ಆಸ್ಪತ್ರೆ ಒದಗಿಸಿದೆ. ಕೆಲ ದಿನಗಳ ಹಿಂದಷ್ಟೇ ಪೋಸ್ಟ್​ ಮಾಡಲಾದ ಈ ವಿಡಿಯೋ 9.5 ಮಿಲಿಯನ್​ಗೂ ಅಧಿಕ ವೀವ್ಸ್​ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.

ಅಲ್ಲದೇ ಕಮೆಂಟ್​ ವಿಭಾಗದಲ್ಲಿ ಅನೇಕರು ಜೀವವಿಮೆಯ ಸೌಲಭ್ಯವನ್ನ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೆ ಈ ವ್ಯಕ್ತಿಯು ಒಂದೇ ಒಂದು ಜೀವವಿಮೆಯನ್ನೂ ಮಾಡಿಸಿಕೊಂಡಿಲ್ಲವಂತೆ.

ದುಬಾರಿ ವೈದ್ಯಕೀಯ ಸೇವೆಗಳಿಗೆ ಅಮೆರಿಕ ಹೆಸರುವಾಸಿಯಾಗಿದೆ. ಚಿಕಿತ್ಸೆ ವಿಚಾರದಲ್ಲಿ ಅಮೆರಿಕದ ಎಲ್ಲಾ ಆಸ್ಪತ್ರೆಗಳಲ್ಲೂ ದುಬಾರಿ ಬಿಲ್​ನ್ನೇ ನೀಡಲಾಗುತ್ತದೆ. ಮಧ್ಯಮ ವರ್ಗದವರಿಗೆ ಅಮೆರಿಕದ ಆಸ್ಪತ್ರೆಗಳ ಬಿಲ್​ನ್ನು ಭರಿಸೋದು ಭಾರೀ ಕಷ್ಟದ ಕೆಲಸವೇ ಸರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...