ನ್ಯೂಯಾರ್ಕ್: ತನ್ನ ಮಾಜಿ ಗೆಳತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವೀಡಿಯೊ ನೋಡಿ ಅಮೆರಿಕದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಪೆನ್ಸಿಲ್ವೇನಿಯಾ ಪೊಲೀಸರು ಫಾಕ್ಸ್ ನ್ಯೂಸ್ ತಿಳಿಸಿದೆ.
35 ವರ್ಷದ ಮ್ಯಾಂಡಿ ರೀಶ್ ಎಂದು ಗುರುತಿಸಲಾದ ಮಹಿಳೆ, ಮಾಜಿ ಪ್ರೇಮಿ ಕೆವಿನ್ ಮೆಟ್ಜರ್ಗೆ ಈ ವಿಡಿಯೋ ಕಳುಹಿಸಿದ್ದಾಳೆ. ಇದರ ಜೊತೆಗೆ ಮೆಸೇಜ್ ಕೂಡ ಇದ್ದು, ನಿನ್ನ ಜೊತೆ ಸಂಪರ್ಕವನ್ನು ಕಡಿದುಕೊಳ್ಳುವುದಾಗಿ ಹೇಳಿದ್ದಾಳೆ.
ನಾನು ಹೊಸ ಪುರುಷನೊಂದಿಗೆ ಹೋಗುತ್ತಿದ್ದೇನೆ ಮತ್ತು ನಿನ್ನನ್ನು ಮತ್ತೆ ನೋಡುವುದಿಲ್ಲ ಎಂದು ವಾಟ್ಸಾಪ್ ಮಾಡಿರುವುದು ಪೊಲೀಸರಿಗೆ ತಿಳಿದುಬಂದಿದೆ. ಆತ ನಿನಗಿಂತ ಉತ್ತಮವಾಗಿದ್ದಾನೆ. ನಿನ್ನ ಮಗಳು ಕೂಡ ಅವನನ್ನು ಡ್ಯಾಡಿ ಎಂದು ಕರೆಯುತ್ತಾಳೆ ಎಂದು ಬರೆಯಲಾಗಿದ್ದು, ಇದನ್ನು ನೋಡಿದ ಮಾಜಿ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.