ಅಮೆರಿಕದ ಮಿನೆಸೋಟಾದ ಶಾಲೆಯೊಂದರ ಮಕ್ಕಳು ಅಲ್ಲಿನ ಸಹಾಯಕ ಸಿಬ್ಬಂದಿಯ ಪರವಾಗಿ ಕೆಲಸ ಮಾಡುವ ಮೂಲಕ ನೆಟ್ಟಿಗರಿಂದ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕೋವಿಡ್-19 ಕಾಲಘಟ್ಟದಲ್ಲಿ ಸ್ವಚ್ಛತಾ ಸಿಬ್ಬಂದಿಯ ಕೊರತೆ ಇರುವ ನಡುವೆ, ಖುದ್ದು ಮಕ್ಕಳಿಂದಲೇ ಈ ಕೆಲಸ ಮಾಡಲು ಪ್ರೇರೇಪಣೆ ಕೊಡುತ್ತಿದೆ ಹೆನ್ನೆಪಿನ್ ಸ್ಕೂಲ್ ಡಿಸ್ಟ್ರಿಕ್ಟ್. ಸ್ವಚ್ಛತಾ ಸಿಬ್ಬಂದಿಯ ಕೊರತೆಯ ಸುದ್ದಿ, ಕಟ್ಟಡಗಳು ಮತ್ತು ಮೈದಾನಗಳ ಜಿಲ್ಲಾ ಸಹಾಯಕ ನಿರ್ದೇಶಕ ಟಾಮ್ ಕಾರ್ಪ್ ಗಮನಕ್ಕೆ ಬಂದಿದೆ.
ಕೋವಿಡ್ ಸೋಂಕಿಗೊಳಗಾದ ಸಿಬ್ಬಂದಿಗೆ 7 ದಿನ ಸಂಬಳ ಸಹಿತ ಕಡ್ಡಾಯ ರಜೆ: ಉತ್ತರ ಪ್ರದೇಶ ಸರ್ಕಾರದ ಮಹತ್ವದ ಆದೇಶ
ಆ ಬಳಿಕ ಸ್ವಚ್ಛತಾ ಸಿಬ್ಬಂದಿಯ ಜಾಗದಲ್ಲಿ ವಿದ್ಯಾರ್ಥಿಗಳಿಗೆ ಒಂದಷ್ಟು ದಿನಗಳ ಮಟ್ಟಿಗೆ ಸ್ವಚ್ಛತಾ ಅರಿವು ಮೂಡಿಸಿ, ಅವರಿಂದಲೇ ಈ ಕೆಲಸಗಳನ್ನು ಮಾಡಿಸುವ ಆಸಕ್ತಿಕರ ಐಡಿಯಾ ಕಂಡುಕೊಂಡಿದ್ದಾರೆ ಟಾಮ್.
ಈ ಸಂಬಂಧ, ಮೇಲ್ಕಂಡ ಶಾಲಾ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಬ್ಲೇನ್ ಪ್ರೌಢಶಾಲೆಯ ಪ್ರಾಂಶುಪಾಲರಿಗೆ ಕರೆ ಮಾಡಿದ ಟಾಮ್, ಅದಕ್ಕೆ ಅವರಿಂದ ಸಮ್ಮತಿಯನ್ನೂ ಪಡೆದಿದ್ದಾರೆ.
ವಿದ್ಯಾರ್ಥಿಗಳು ಈ ಕೆಲಸಗಳನ್ನು ಮಾಡಲು ಪ್ರತಿ ಗಂಟೆಗೆ $15.3ಯಂತೆ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ. ತಮ್ಮ ಮನೆಗಳನ್ನು ತಲುಪಲು ಶಾಲಾ ಚಟುವಟಿಕೆಯ ಬಸ್‌ನ ಸೌಲಭ್ಯವನ್ನೂ ಸಹ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಈ ಅಭಿಯಾನ ಚಾಲ್ತಿಯಲ್ಲಿದ್ದು, ವಿದ್ಯಾರ್ಥಿಗಳು ತಮ್ಮ ಈ ಕೈಂಕರ್ಯಕ್ಕೆ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.