ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ತಮ್ಮ ರಕ್ಷಣಾ ಕಾರ್ಯದರ್ಶಿಯಾಗಿ ನಿವೃತ್ತ ಜನರಲ್ ಲಾಯ್ಡ್ ಆಸ್ಟಿನ್ರನ್ನ ಆ್ಯಕೆ ಮಾಡಿದ್ದಾರೆ.
ಲಾಯ್ಡ್ ಆಸ್ಟಿನ್ ಬರಾಕ್ ಒಬಾಮಾ ಅಮೆರಿಕ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಪಡೆಗಳ ನೇತೃತ್ವ ವಹಿಸಿದ್ದರು. ಈ ಮೂಲಕ ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಮೊದಲ ಕಪ್ಪು ವರ್ಣೀಯ ಎಂಬ ಹೆಗ್ಗಳಿಕೆಗೂ ಆಸ್ಟಿನ್ ಪಾತ್ರರಾಗಿದ್ದಾರೆ.
ರಕ್ಷಣಾ ಇಲಾಖೆ ಮಾಜಿ ಅಧಿಕಾರಿಯಾಗಿದ್ದ ಮಿಚೆಲ್ ಪ್ಲೂರ್ನಾಯ್ ವಿರುದ್ಧ ಕಪ್ಪು ವರ್ಣೀಯ ಆಸ್ಟಿನ್ ಆಶ್ಚರ್ಯಕರ ಗೆಲುವು ದಾಖಲಿಸಿದ್ದಾರೆ. ಪ್ಲೂನಾರ್ಯ್ ಕೂಡ ಅಮೆರಿಕದ ಮೊದಲ ಮಹಿಳಾ ರಕ್ಷಣಾ ಕಾರ್ಯದರ್ಶಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ವೆಸ್ಟ್ ಪಾಯಿಂಟ್ ಮಿಲಿಟರಿ ಅಕಾಡೆಮಿಯಲ್ಲಿ ಪದವಿ ಪಡೆದಿದ್ದ ಆಸ್ಟಿನ್ ನಾಲ್ಕು ದಶಕಗಳ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2010ರಲ್ಲಿ ಆಸ್ಟಿನ್ರನ್ನ ಇರಾಕ್ ಅಮೆರಿಕ ಪಡೆಗಳ ಕಮಾಂಡಿಂಗ್ ಜನರಲ್ ಆಗಿ ನೇಮಿಸಲಾಗಿತ್ತು. ಹಾಗೂ ಎರಡು ವರ್ಷಗಳ ಬಳಿಕ ಮಧ್ಯಪ್ರಾಚ್ಯ ಹಾಗೂ ಅಪ್ಘಾನಿಸ್ತಾನದ ಎಲ್ಲಾ ಪೆಂಟಗನ್ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿಕೊಂಡು ಸೆಂಟ್ರಲ್ ಕಮಾಂಡ್ನ ಕಮಾಂಡರ್ ಆದರು.