ವಾಷಿಂಗ್ಟನ್: ಅಮೆರಿಕ ಸರ್ಕಾರದಿಂದ ಭಾರತೀಯ ಸ್ನೇಹಿ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಮುಂದೆ ಹೆಚ್ -1 ಬಿ ವೀಸಾದಾರರ ಸಂಗಾತಿಗಳಿಗೂ ಉದ್ಯೋಗ ಅವಕಾಶ ನೀಡಲಾಗುವುದು.
ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಹೆಚ್ -1 ಬಿ ವೀಸಾ ಪರವಾನಿಗೆ ಹೊಂದಿದವರ ಸಂಗಾತಿಗೂ ಉದ್ಯೋಗ ನೀಡಲು ಅವಕಾಶ ಕಲ್ಪಿಸುವ ಮಹತ್ವದ ನಿರ್ಣಯಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಸರ್ಕಾರ ಅಂಗೀಕಾರ ನೀಡಿದೆ. ಇದರಿಂದಾಗಿ ಹೆಚ್ -1 ಬಿ ವೀಸಾ ಪಡೆದು ಉದ್ಯೋಗದಲ್ಲಿರುವವರ ಸಂಗಾತಿಗಳಿಗೆ ಉದ್ಯೋಗವಕಾಶ ಪಡೆಯಲು ಅನುಕೂಲವಾಗಲಿದೆ.
ಅಮೆರಿಕದ ಕಂಪನಿಗಳು ಪ್ರತಿವರ್ಷ ಭಾರತದಂತಹ ದೇಶಗಳಿಂದ ಸಾವಿರಾರು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತವೆ. ಇಂತಹ ಉದ್ಯೋಗಿಗಳ ಸಂಗಾತಿ ಮತ್ತು ಅವರ 21 ವರ್ಷ ವಯೋಮಿತಿಯೊಳಗಿನ ಮಕ್ಕಳಿಗೆ ಹೆಚ್ -4 ವೀಸಾ ನೀಡಲಾಗುವುದು. ಇವರು ಉದ್ಯೋಗ ಮಾಡಲು ಅವಕಾಶ ಇರಲಿಲ್ಲ.
ಈಗ ಅಮೆರಿಕದಲ್ಲಿ ನೆಲೆಸಿರುವ ಹೆಚ್ -4 ವೀಸಾ ಪಡೆದವರಲ್ಲಿ ಬಹುತೇಕರು ಭಾರತೀಯ ಮೂಲದವರಾಗಿದ್ದು, ಅವರಿಗೂ ಉದ್ಯೋಗಾವಕಾಶ ಕಲ್ಪಿಸಲು ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದೆ.