alex Certify ಮದುವೆಯಾದ ಮರುಗಳಿಗೆಯಲ್ಲೇ ಮಗಳ ಜೀವ ತೆಗೆದ ಪೋಷಕರು, ಪ್ರೇಮಿಯೊಂದಿಗೆ ಪುತ್ರಿಯ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಮರುಗಳಿಗೆಯಲ್ಲೇ ಮಗಳ ಜೀವ ತೆಗೆದ ಪೋಷಕರು, ಪ್ರೇಮಿಯೊಂದಿಗೆ ಪುತ್ರಿಯ ಹತ್ಯೆ

ಪಾಟ್ನಾ: ಮಗಳು ಇಚ್ಚೆಗೆ ವಿರುದ್ಧವಾಗಿ ಬೇರೆ ಯುವಕನನ್ನು ಮದುವೆಯಾಗಿದ್ದರಿಂದ ಆಕ್ರೋಶಗೊಂಡ ಆಕೆಯ ಪೋಷಕರು ಇಬ್ಬರನ್ನೂ ಹತ್ಯೆ ಮಾಡಿದ ಘಟನೆ ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದಿದ್ದು, ಆರು ತಿಂಗಳಲ್ಲಿ ಇದು ಜಿಲ್ಲೆಯಲ್ಲಿ ನಡೆದ ಎರಡನೇ ಹತ್ಯೆಯಾಗಿದೆ.

ಹದಿಹರೆಯದ ಹುಡುಗಿ ಮತ್ತು ಆಕೆಯ ಪ್ರೇಮಿ ಒಂದೇ ಸಮುದಾಯದವರಾಗಿದ್ದು, ಇಬ್ಬರೂ ಪ್ರೀತಿಸಿದ್ದರು. ಅವರು ದೇವಾಲಯದಲ್ಲಿ ಮದುವೆಯಾಗಿದ್ದನ್ನು ಕಂಡವರು ಹುಡುಗಿಯ ಪೋಷಕರಿಗೆ ತಿಳಿಸಿದ್ದಾರೆ. ಹುಡುಗಿಯ ತಂದೆ ಮತ್ತು ಸೋದರ ಸಂಬಂಧಿಗಳು ಅವರನ್ನು ಕೊಲೆ ಮಾಡಿ ಮರಕ್ಕೆ ನೇಣು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲಸವಿದೆ ಎಂದು ಮನೆಯಿಂದ ಹೊರಟಿದ್ದ ಹುಡುಗಿ ಸಕ್ಕತೆ ತರುವುದಾಗಿ ಮನೆಯಲ್ಲಿ ಹೇಳಿಬಂದಿದ್ದ ಹುಡುಗನೊಂದಿಗೆ ದೇವಾಲಯಕ್ಕೆ ಹೋಗಿ ಮದುವೆಯಾಗಿದ್ದಾಳೆ. ವಿಷಯ ತಿಳಿದು ಅಲ್ಲಿಗೆ ಬಂದಿದ್ದ ಹುಡುಗಿಯ ತಂದೆ ಮತ್ತು ಸೋದರ ಸಂಬಂಧಿಗಳು ಆಕೆ ಸಿಂಧೂರ ಧರಿಸಿರುವುದನ್ನು ಗಮನಿಸಿ ಕೊಲೆ ಮಾಡಿದ್ದಾರೆ. ಬಳಿಕ ಮರಕ್ಕೆ ನೇಣು ಹಾಕಿದ್ದಾರೆ.

ಗ್ರಾಮಸ್ಥರಿಂದ ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿದ್ದು, ಬಾಲಕಿಯ ತಂದೆಯನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಜಮುಯಿ ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಕುಮಾರ್ ಮಂಡಲ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...