ಒತ್ತಾಯಪೂರ್ವಕವಾಗಿ ತಮ್ಮನ್ನು ಕ್ವಾರಂಟೈನ್ ಇರಿಸಿದ್ದಾರೆಂದು ಕೋಪಗೊಂಡಿದ್ದ ಮಹಿಳೆಯು ಹೋಟೆಲ್ಗೆ ಬೆಂಕಿ ಹಚ್ಚಿದ ಶಾಕಿಂಗ್ ಘಟನೆಯು ಆಸ್ಟ್ರೇಲಿಯಾದ ಕ್ವಿನ್ಲ್ಯಾಂಡ್ನಲ್ಲಿ ನಡೆದಿದೆ. 31 ವರ್ಷದ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಎರಡು ವಾರಗಳ ಕಾಲ ಬಲವಂತವಾಗಿ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಭಾನುವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು 11 ಅಂತಸ್ತಿನ ಪೆಸಿಫಿಕ್ ಹೋಟೆಲ್ನ ಮೇಲಿನ ಮಹಡಿಯಲ್ಲಿದ್ದ 160ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಈ ಅವಘಡದಲ್ಲಿ ಯಾರಿಗೂ ಗಂಭೀರ ಗಾಯ ಉಂಟಾಗಿಲ್ಲ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಪೊಲೀಸರು ಎರಡು ವಾರಗಳ ಕಡ್ಡಾಯ ಕ್ವಾರಂಟೈನ್ಗೆ ಒಳಗಾಗಿದ್ದ ಮಹಿಳೆಯು ಹೋಟೆಲ್ನಲ್ಲಿ ಕೇವಲ ಒಂದೆರಡು ದಿನಗಳನ್ನು ಕಳೆಯುತ್ತಿದ್ದಂತೆಯೇ ತಮ್ಮ ಹೋಟೆಲ್ ಕೋಣೆಯ ಬೆಡ್ನ ಕೆಳಗೆ ಬೆಂಕಿ ಹಚ್ಚಿದ್ದಾರೆ. ಇದಕ್ಕೂ ಮುನ್ನ ಆಕೆ ಹೋಟೆಲ್ ಸಿಬ್ಬಂದಿಗೆ ಇನ್ನೂ ಅನೇಕ ತೊಂದರೆಗಳನ್ನು ಉಂಟು ಮಾಡಿದ್ದಳು ಎಂದು ತಿಳಿದುಬಂದಿದೆ.
ಒಮಿಕ್ರಾನ್ ರೂಪಾಂತರದ ಆತಂಕದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಓಮ್ರಿಕಾನ್ ಕೋವಿಡ್ 19 ರೂಪಾಂತರದ ಮೂರನೇ ಪ್ರಕರಣವನ್ನು ದೃಢಪಡಿಸಿದ್ದಾರೆ.