alex Certify ಕ್ವಾರಂಟೈನ್​​ ಮಾಡಿಸಿದರೆಂದು ಹೊಟೇಲ್‌ ಗೆ ಬೆಂಕಿ ಹಚ್ಚಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ವಾರಂಟೈನ್​​ ಮಾಡಿಸಿದರೆಂದು ಹೊಟೇಲ್‌ ಗೆ ಬೆಂಕಿ ಹಚ್ಚಿದ ಮಹಿಳೆ

ಒತ್ತಾಯಪೂರ್ವಕವಾಗಿ ತಮ್ಮನ್ನು ಕ್ವಾರಂಟೈನ್​ ಇರಿಸಿದ್ದಾರೆಂದು ಕೋಪಗೊಂಡಿದ್ದ ಮಹಿಳೆಯು ಹೋಟೆಲ್​ಗೆ ಬೆಂಕಿ ಹಚ್ಚಿದ ಶಾಕಿಂಗ್​ ಘಟನೆಯು ಆಸ್ಟ್ರೇಲಿಯಾದ ಕ್ವಿನ್​ಲ್ಯಾಂಡ್​ನಲ್ಲಿ ನಡೆದಿದೆ. 31 ವರ್ಷದ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಎರಡು ವಾರಗಳ ಕಾಲ ಬಲವಂತವಾಗಿ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಭಾನುವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು 11 ಅಂತಸ್ತಿನ ಪೆಸಿಫಿಕ್​ ಹೋಟೆಲ್​ನ ಮೇಲಿನ ಮಹಡಿಯಲ್ಲಿದ್ದ 160ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ.

ಈ ಅವಘಡದಲ್ಲಿ ಯಾರಿಗೂ ಗಂಭೀರ ಗಾಯ ಉಂಟಾಗಿಲ್ಲ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಪೊಲೀಸರು ಎರಡು ವಾರಗಳ ಕಡ್ಡಾಯ ಕ್ವಾರಂಟೈನ್​ಗೆ ಒಳಗಾಗಿದ್ದ ಮಹಿಳೆಯು ಹೋಟೆಲ್​ನಲ್ಲಿ ಕೇವಲ ಒಂದೆರಡು ದಿನಗಳನ್ನು ಕಳೆಯುತ್ತಿದ್ದಂತೆಯೇ ತಮ್ಮ ಹೋಟೆಲ್​ ಕೋಣೆಯ ಬೆಡ್​ನ ಕೆಳಗೆ ಬೆಂಕಿ ಹಚ್ಚಿದ್ದಾರೆ. ಇದಕ್ಕೂ ಮುನ್ನ ಆಕೆ ಹೋಟೆಲ್​ ಸಿಬ್ಬಂದಿಗೆ ಇನ್ನೂ ಅನೇಕ ತೊಂದರೆಗಳನ್ನು ಉಂಟು ಮಾಡಿದ್ದಳು ಎಂದು ತಿಳಿದುಬಂದಿದೆ.

ಒಮಿಕ್ರಾನ್​​ ರೂಪಾಂತರದ ಆತಂಕದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ಕ್ವಾರಂಟೈನ್​ ಕಡ್ಡಾಯಗೊಳಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಓಮ್ರಿಕಾನ್​ ಕೋವಿಡ್ 19 ರೂಪಾಂತರದ ಮೂರನೇ ಪ್ರಕರಣವನ್ನು ದೃಢಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...