ಉತ್ತರ ಪ್ರದೇಶದ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಮತದಾನದ ಮೊದಲ ಹಂತದಲ್ಲಿ, ಹಿರಿಯ ವ್ಯಕ್ತಿಯೊಬ್ಬರು ತಮ್ಮನ್ನು ಮೃತರು ಎಂದು ಘೋಷಿಸಲ್ಪಟ್ಟ ಕಾರಣ ಮತದಾನ ಮಾಡಲು ಬಿಟ್ಟಿಲ್ಲ ಎಂದಿದ್ದಾರೆ.
ಶಾಮ್ಲಿಯ ಥಾಣಾ ಭವನ್ ಎಂಬ ಭೈಂಸ್ವಾಲ್ ಗ್ರಾಮದ 85 ವರ್ಷದ ಅಬ್ದುಲ್ ಅಹ್ಮದ್, “ನಾನು ಯಾವಾಗಲೂ ಮತದಾನ ಮಾಡುತ್ತಾ ಬಂದಿದ್ದೇನೆ. ಆದರೆ ಈ ಬಾರಿ, ಅನಿರೀಕ್ಷಿತವಾದದ್ದು ಏನೋ ಆಗಿದೆ. ಪಟ್ಟಿಯ ಪ್ರಕಾರ ನಾನು ಮೃತನಾಗಿದ್ದೇನೆ ಎಂದು ನನಗೆ ಹೇಳಿದ್ದರು. ಹಾಗಾದಲ್ಲಿ ಅವರ ಮುಂದೆ ನಿಂತಿರುವ ನಾನೇನು ದೆವ್ವವೇ?” ಎಂದಿದ್ದಾರೆ.
ಹೆಲಿಕಾಪ್ಟರ್ ನಲ್ಲಿಯೇ ಕುಳಿತು ಚುನಾವಣಾ ಪ್ರಚಾರ ಮಾಡಿದ ಮಧ್ಯಪ್ರದೇಶ ಸಿಎಂ...!
ಅಹ್ಮದ್‌ರ ಆಪಾದನೆ ಸುಳ್ಳು ಎಂದ ಮತಗಟ್ಟೆ ಅಧಿಕಾರಿ ಶಾಲು ಸಿಂಗ್, “ಅವರ ಹೆಸರು ಪಟ್ಟಿಯಲ್ಲಿರಲಿಲ್ಲ. ಈ ವಿಚಾರವನ್ನು ಮ್ಯಾಜಿಸ್ಟ್ರೇಟ್ ಮುಂದಕ್ಕೆ ತರಲಾಗಿದೆ. ಆದರೂ ನಾವು ಆತ ಮೃತಪಟ್ಟಿದ್ದಾರೆ ಎಂದು ಹೇಳಿಲ್ಲ,” ಎಂದಿದ್ದಾರೆ.
ಈ ಕುರಿತು ಮಾತನಾಡಿದ ಜ಼ಹೀರ್ ಆಲಂ, “ನಾವು ನಿಯಮಗಳನ್ನು ಪಾಲಿಸುತ್ತೇವೆ. ಪಟ್ಟಿಯನ್ನು ನಾವು ತಯಾರಿಸುವುದಿಲ್ಲ. ಅದು ನಮ್ಮತ್ತ ಬಂದಾಗ ಪಟ್ಟಿಯಲ್ಲಿರುವ ಮಂದಿ ಮಾತ್ರವೇ ಮತದಾನ ಮಾಡುತ್ತಾರೆ ಎಂದು ಖಾತ್ರಿ ಪಡಿಸುತ್ತೇವೆ. ಆತನ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿತ್ತು” ಎಂದಿದ್ದಾರೆ.
ಉ.ಪ್ರ. ವಿಧಾನ ಸಭೆಯ ಮೊದಲ ಹಂತದ ಚುನಾವಣೆ ಯಶಸ್ವಿಯಾಗಿ ಮುಗಿದಿದೆ. ಆದರೂ ಕೇವಲ 59.87% ಮತದಾರರಷ್ಟೇ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮೊದಲ ಹಂತದ ಮತದಾನದಲ್ಲಿ ರಾಜ್ಯದ 11 ಜಿಲ್ಲೆಗಳ 58 ಕ್ಷೇತ್ರಗಳು ತಮ್ಮ ಅಭ್ಯರ್ಥಿಗಳನ್ನು ಆರಿಸಿವೆ.