alex Certify ಯುಪಿಐ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್; ಶೀಘ್ರದಲ್ಲೇ ಡಿಜಿಟಲ್ ಸಾಲ ಸೌಲಭ್ಯ‌ ಸೇವೆ ಸೇರ್ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಪಿಐ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್; ಶೀಘ್ರದಲ್ಲೇ ಡಿಜಿಟಲ್ ಸಾಲ ಸೌಲಭ್ಯ‌ ಸೇವೆ ಸೇರ್ಪಡೆ

ಪೂರ್ವ-ಮಂಜೂರಾದ ಸಾಲ ನೀಡುವ ಸೌಲಭ್ಯವನ್ನು ಯುಪಿಐನಲ್ಲಿ ಒಳಗೊಳ್ಳುವಂತೆ ಕಾರ್ಯಯೋಜನೆಗಳನ್ನು ತರಲು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಸ್ತಾವನೆ ಇಟ್ಟಿದೆ.

ಸದ್ಯ ದೇಶದ ಮುಂಚೂಣಿ ಆನ್ಲೈನ್ ಪಾವತಿ ಪ್ಲಾಟ್‌ಫಾರಂ ಆಗಿರುವ ಯುಪಿಐ ಅನೇಕ ಸೌಲಭ್ಯಗಳನ್ನು ಕೊಡಮಾಡುತ್ತಿದೆ. ಭಾರತದ ಡಿಜಿಟಲ್ ಪಾವತಿಗಳ 75%ನಷ್ಟನ್ನು ಯುಪಿಐ ನಿರ್ವಹಿಸುತ್ತಿದೆ.

“ಠೇವಣಿ ಖಾತೆಗಳೊಂದಿಗೆ ಬ್ಯಾಂಕುಗಳಿಂದ ಪೂರ್ವ-ಮಂಜೂರಾತಿ ಪಡೆದ ಸಾಲಗಳ ವರ್ಗಾವಣೆ ಮಾಡುವ ಸೌಲಭ್ಯವನ್ನು ಸಹ ಯುಪಿಐನಲ್ಲಿ ತರಲು ಉದ್ದೇಶಿಸಲಾಗಿದೆ,” ಎಂದು ಆಅರ್‌ಬಿಐ ಗವರ್ನರ್‌ ಶಕ್ತಿಕಾಂತಾ ದಾಸ್ ತಿಳಿಸಿದ್ದಾರೆ.

ಸರಳವಾಗಿ ಹೇಳುವುದಾದರೆ, ಯುಪಿಐ ಮೂಲಕ ಬ್ಯಾಂಕುಗಳು ನೀಡಿದ ಸಾಲದಲ್ಲಿ ಪಾವತಿ ಮಾಡುವ ಸವಲತ್ತನ್ನು ತರುವ ಆಲೋಚನೆ ಇದಾಗಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ವಿಶಿಷ್ಟ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ.

ಸದ್ಯದ ಮಟ್ಟಿಗೆ ಯುಪಿಐ ವ್ಯವಹಾರಗಳು ಬ್ಯಾಂಕುಗಳಲ್ಲಿರುವ ಠೇವಣಿ ಖಾತೆಗಳೊಂದಿಗೆ, ಕೆಲವೊಮ್ಮೆ ವ್ಯಾಲೆಟ್‌ಗಳಂಥ ಪೂರ್ವ-ಪಾವತಿ ಉಪಕರಣಗಳೊಂದಿಗೆ ನಡೆಯುತ್ತಿವೆ. ರೂಪೇ ಕಾರ್ಡ್‌ಗಳನ್ನು ಯುಪಿಐನೊಂದಿಗೆ ಲಿಂಕ್ ಮಾಡಲು ಇತ್ತೀಚೆಗೆ ಅನುಮತಿ ನೀಡಲಾಗಿತ್ತು.

ಭಾರತೀಯ ರಾಷ್ಟ್ರೀಯ ಪಾವತಿ ಸಂಸ್ಥೆ (ಎನ್‌ಪಿಸಿಐ) ಅಭಿವೃದ್ಧಿಪಡಿಸಿರುವ ಯುಪಿಐನೊಂದಿಗೆ 400 ಬ್ಯಾಂಕುಗಳು ಹಾಗೂ ಬ್ಯಾಂಕಿಂಗ್‌ಯೇತರ ಹಣಕಾಸು ಸಂಸ್ಥೆಗಳು ಬೆಸೆದುಕೊಂಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...