alex Certify ಫೀಚರ್​ ಫೋನ್​ಗಳಲ್ಲಿಯೂ ಯುಪಿಐ ಪಾವತಿ…! RBI ನಿಂದ ಮಹತ್ವದ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೀಚರ್​ ಫೋನ್​ಗಳಲ್ಲಿಯೂ ಯುಪಿಐ ಪಾವತಿ…! RBI ನಿಂದ ಮಹತ್ವದ ಘೋಷಣೆ

ದೇಶದಲ್ಲಿ ಡಿಜಿಟಲ್​ ಪಾವತಿ ವ್ಯವಸ್ಥೆಗೆ ಇನ್ನಷ್ಟು ಉತ್ತೇಜನ ನೀಡುವ ಸಲುವಾಗಿ ಆರ್.​ಬಿ.ಐ. ಗವರ್ನರ್​ ಶಕ್ತಿಕಾಂತ್​ ದಾಸ್​​ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಈ ವಿಚಾರವಾಗಿ ಇಂದು ಮಾತನಾಡಿದ ಅವರು ಶೀಘ್ರದಲ್ಲಿಯೇ ಫೀಚರ್​ ಫೋನ್​ಗಳಲ್ಲಿಯೂ ಯುಪಿಐ ಪಾವತಿ ವ್ಯವಸ್ಥೆಯನ್ನು ಆರಂಭಿಸುವುದಾಗಿ ಹೇಳಿದ್ದಾರೆ.

ಇಷ್ಟು ದಿನ ಕೇವಲ ಸ್ಮಾರ್ಟ್​ಫೋನ್​ಗಳಲ್ಲಿ ಇಂಟರ್ನೆಟ್​ ಸೇವೆಗಳು ಇದ್ದರೆ ಮಾತ್ರ ಯುಪಿಐ ಪಾವತಿ ಮಾಡುವುದು ಸಾಧ್ಯವಾಗುತ್ತಿತ್ತು. ಆದರೆ ಇನ್ಮುಂದೆ ಇಂಟರ್ನೆಟ್​ ಸೇವೆಯನ್ನು ಬಳಕೆ ಮಾಡದೆಯೇ ಯುಪಿಐ ಪಾವತಿ ಮಾಡಬಹುದಾಗಿದೆ. ಇತ್ತೀಚೆಗೆ ನಡೆದ ದ್ವೈಮಾಸಿಕ ಹಣಕಾಸು ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಶಕ್ತಿಕಾಂತ್​ ದಾಸ್​ ಹೇಳಿದ್ದಾರೆ.

ಯುಪಿಐ ದೇಶದ ಏಕೈಕ ಅತಿದೊಡ್ಡ ಚಿಲ್ಲರೆ ಪಾವತಿ ವ್ಯವಸ್ಥೆಯಾಗಿದೆ. ಹಣಕಾಸು ಮಾರುಕಟ್ಟೆಗಳಲ್ಲಿ ಸೇವೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಯುಪಿಐ ಆಧಾರಿತ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ವಿವಿಧ ಆ್ಯಪ್​ಗಳ ಸಹಾಯದಿಂದ ನೀವು ಬ್ಯಾಂಕ್​​ಗೆ ಯುಪಿಐ ಲಿಂಕ್​ ಮಾಡಿಕೊಂಡು ಡಿಜಿಟಲ್​ ಪಾವತಿ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...