alex Certify UPI ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

UPI ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಇಂದು ವಹಿವಾಟುಗಳು ಬಹುತೇಕ ಡಿಜಿಟಲ್ ಮಾಧ್ಯಮದ ಮೂಲಕ ಆಗುತ್ತಿದ್ದು, ಹಣ ಪಾವತಿಸಲು ಹಾಗೂ ಸ್ವೀಕರಿಸಲು ಯುಪಿಐ, ಪೇಟಿಎಂ, ಗೂಗಲ್ ಪೇ, ಫೋನ್ ಪೇ ಮೊದಲಾದವುಗಳನ್ನು ಬಳಸುತ್ತೇವೆ. ಆದರೆ ಇವುಗಳ ಬಳಕೆ ಹೆಚ್ಚಾದಂತೆಲ್ಲ ವಂಚನೆಯೂ ಜಾಸ್ತಿಯಾಗತೊಡಗಿದೆ.

ವಂಚಕರು ಸುಳ್ಳುಗಳನ್ನ ಹೇಳಿ ಬಳಕೆದಾರರಿಂದ ಪಿನ್ ಪಡೆದು ಅವರ ಖಾತೆಯಿಂದ ಹಣವನ್ನು ಲಪಟಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುಪಿಐ ಬಳಕೆದಾರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.

ನಿಮ್ಮ ಖಾತೆಯಿಂದ ಹಣವನ್ನು ಕಡಿತಗೊಳಿಸಲು ಮಾತ್ರ ಯುಪಿಐ ಪಿನ್ ನಮೂದಿಸಿ. ಹಣವನ್ನು ಸ್ವೀಕರಿಸಲು ಯುಪಿಐ ಪಿನ್ ಅಗತ್ಯವಿಲ್ಲ.

ಯುಪಿಐ ಐಡಿಯನ್ನು ದೃಢೀಕರಿಸಲು ಸ್ವೀಕರಿಸುವವರ ಹೆಸರನ್ನು ಪರೀಕ್ಷಿಸಲು ಮರೆಯದಿರಿ. ಪರಿಶೀಲನೆ ಇಲ್ಲದೆ ಪಾವತಿ ಮಾಡಬೇಡಿ.

ಅಪ್ಲಿಕೇಶನ್ ನ ಯುಪಿಐ ಪಿನ್ ಪುಟದಲ್ಲಿ ಮಾತ್ರ ಯುಪಿಐ ಪಿನ್ ಬಳಸಿ. ಯುಪಿಐ ಪಿನ್ ಅನ್ನು ಬೇರೆಲ್ಲಿಯೂ ಹಂಚಿಕೊಳ್ಳಬೇಡಿ.

ಹಣವನ್ನು ನೀಡಲು ಮಾತ್ರ ಕ್ಯೂಆರ್ ಸ್ಕ್ಯಾನ್ ಮಾಡಿ. ಹಣವನ್ನು ಸ್ವೀಕರಿಸಲು ಅಲ್ಲ.

ಯಾವುದೇ ಅಪರಿಚಿತ ವ್ಯಕ್ತಿ ಕೇಳಿದಾಗ ಮತ್ತು ಅದರ ಉಪಯುಕ್ತತೆಯನ್ನು ಅರ್ಥ ಮಾಡಿಕೊಳ್ಳದೆ ಯಾವುದೇ ಸ್ಕ್ರೀನ್ ಹಂಚಿಕೆ ಅಥವಾ ಎಸ್ಎಂಎಸ್ ಫಾರ್ವರ್ಡ್ ಮಾಡುವ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಬೇಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...