alex Certify ಈ 5 ಕಾರುಗಳಿಗೆ ಮರುವಿನ್ಯಾಸ ಮಾಡುತ್ತಿದೆ ಮಾರುತಿ ಸುಜ಼ುಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ 5 ಕಾರುಗಳಿಗೆ ಮರುವಿನ್ಯಾಸ ಮಾಡುತ್ತಿದೆ ಮಾರುತಿ ಸುಜ಼ುಕಿ

ದೇಶದ ಕಾರು ಮಾರುಕಟ್ಟೆಯಲ್ಲಿ ಆಕ್ರಮಣಶೀಲ ಹೆಜ್ಜೆ ಇಟ್ಟಿರುವ ಮಾರುತಿ ಸುಜ಼ುಕಿ, ಮುಂದಿನ ದಿನಗಳಲ್ಲಿ 5 ಹೊಸ ಬಿಡುಗಡೆಗಳಿಗೆ ಉತ್ಸುಕವಾಗಿದೆ. ಇವುಗಳ ಪೈಕಿ ಯಾವೊಂದೂ ಹೊಸ ಉತ್ಪನ್ನವಲ್ಲ, ಬದಲಿಗೆ ಚಾಲ್ತಿಯಲ್ಲಿರುವ ಮಾಡೆಲ್‌ಗಳಿಗೆ ಮಾಡಲಾದ ಮಾರ್ಪಾಡುಗಳಾಗಿವೆ.

ಆ ಐದು ಲಾಂಚ್‌ಗಳ ವಿವರಗಳು ಇಂತಿವೆ.

ವಿಟಾರಾ ಬ್ರೀಜ಼ಾ

ತನ್ನ ಪೈಪೋಟಿದಾರರ ವಿರುದ್ಧ ಮೇಲುಗೈ ಸಾಧಿಸುವ ಯತ್ನದಲ್ಲಿ, ವಿಟಾರಾ ಬ್ರೀಜ಼ಾವನ್ನು ಹೊಸ ಅವತಾರದಲ್ಲಿ ಇಳಿಸುತ್ತಿದೆ ಮಾರುತಿ ಸುಜ಼ುಕಿ. ಈ ಕುರಿತು ಕಂಪನಿಯಿಂದ ಅಧಿಕೃತವಾಗಿ ಏನೂ ಕೇಳಿ ಬಂದಿಲ್ಲವಾದರೂ, ಮೇಲ್ಕಂಡ ಕಾರಿನ ಹೊಸ ಅವತಾರದ ಪ್ರಯೋಗಾರ್ಥ ಚಾಲನೆ ಮಾಧ್ಯಮಗಳ ಕಣ್ಣಿಗೆ ಬಿದ್ದಿದೆ.

ಹೊಸ ಬ್ರೀಜ಼ಾದ ಪ್ರೋಟೋಟೈಪ್‌ ಅನ್ನು ಬಹಳ ರಹಸ್ಯವಾಗಿ ಇಡಲಾಗಿದ್ದು, ಅದರ ವಿನ್ಯಾಸದ ವಿವರಗಳನ್ನು ಬಿಟ್ಟುಕೊಟ್ಟಿಲ್ಲ. ಆದರೆ ಸದ್ಯದ ಮಾಡೆಲ್‌ಗಿಂತಲೂ ಹೊಸ ಬ್ರೀಜ಼ಾದ ಹಿಂಬದಿ ಹಾಗೂ ಮುಂಬದಿ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುವ ಮೂಲಕ ಹೊಸ ತಲೆಮಾರಿನ ಈ ಎಸ್‌ಯುವಿಗೊಂದು ಮೇಕ್‌ಓವರ್‌ ನೀಡಲು ಮುಂದಾಗಿದೆ ಮಾರುತಿ ಸುಜ಼ುಕಿ.

ಬಲೆನೋ

ಭಾರತದ ಕಾರು ಮಾರುಕಟ್ಟೆಗೆ ಬಲೆನೋ ಕಾರಿನ ಹೊಸ ಅವತಾರವನ್ನು ಮಾರುತಿ ಸುಜ಼ುಕಿ ಶೀಘ್ರವೇ ಬಿಡುಗಡೆ ಮಾಡಲಿದೆ. ಈ ಹ್ಯಾಚ್‌ಬ್ಯಾಕ್‌ ಕಾರಿನ ವಿನ್ಯಾಸದಲ್ಲಿ ಅಲ್ಪ ಬದಲಾವಣೆಗಳನ್ನು ಮಾಡಲಾಗಿದೆ. ಕಾರಿನ ಮುಂಭಾಗಕ್ಕೆ ಮರುವಿನ್ಯಾಸ ಮಾಡಲಾದ ಗ್ರಿಲ್ ಹಾಗೂ ಸ್ಟೋರ್ಟಿಯಾಗಿ ಕಾಣುವ ಬಂಪರ್‌ ಅಳವಡಿಸಲಾಗಿದೆ. ಫಾಗ್ ಲ್ಯಾಂಪ್‌ಗೆ ಹೊಸ ಗ್ರಿಲ್‌ನಲ್ಲಿ ಅವಕಾಶವಿದ್ದು, ಹೆಡ್‌ಲೈಟ್‌ಗಳಿಗೂ ಮಾರ್ಪಾಡುಗಳನ್ನು ಮಾಡಲಾಗಿದೆ.

ಆಲ್ಟೋ

ಆಲ್ಟೋದ ಹೊಸ ಅವತಾರದ ಬಿಡುಗಡೆಯೂ ಸನಿಹವಾಗಿದೆ. ಸ್ಟೀಲ್ ರಿಮ್, ಹೊಸ ಇಂಡಿಕೇಟರ್‌ಗಳು ಸೇರಿದಂತೆ ಮುಂಭಾಗದ ಇಕ್ಕೆಲಗಳಲ್ಲಿ ಅಲ್ಪ ಮಾರ್ಪಾಡುಗಳನ್ನು ಆಲ್ಟೋ ಕಂಡುಕೊಂಡಿದೆ. ಮುಂಭಾಗದ ಗ್ರಿಲ್ ಹಾಗೂ ಬಂಪರ್‌ ವಿನ್ಯಾಸದಲ್ಲಿ ದೊಡ್ಡ ಮಾರ್ಪಾಡುಗಳು ಆಗಿವೆ. ಹೊಸ ವಿನ್ಯಾಸಕ್ಕೆ ಸಿಂಕ್ ಆಗುವಂತೆ ಹಿಂಬದಿ ಬಂಪರ್‌ ಹಾಗೂ ಟೇಲ್‌ಗೇಟ್‌ಗಳಲ್ಲೂ ಬದಲಾವಣೆಗಳು ಬಂದಿವೆ.

ಜೊತೆಗೆ ಆಲ್ಟೋ ಕಾರಿನ ಒಳಾಂಗಣದಲ್ಲೂ ಸಹ ಮಾರುತಿ ಸುಜ಼ುಕಿ ಬಹಳಷ್ಟು ಮಾರ್ಪಾಡುಗಳನ್ನು ಮಾಡಿದೆ.

ಮಂಗಳೂರಿನಲ್ಲಿ ಎರಡು ಗ್ಯಾಂಗ್ ನಡುವೆ ತಲ್ವಾರ್ ದಾಳಿ

ಎಸ್‌-ಕ್ರಾಸ್

ಯೂರೋಪ್‌ಗೆ ಆಗಮಿಸಿರುವ ಮಾರುತಿ ಸುಜ಼ುಕಿಯ ಎಸ್‌-ಕ್ರಾಸ್‌ಗೆ ಬಹಳಷ್ಟು ಮಾರ್ಪಾಡುಗಳನ್ನು ಮಾಡಲಾಗಿದೆ. ನಾಲ್ಕು ಚಕ್ರದ ವಾಹನಗಳ ಚಾಲನಾ ವ್ಯವಸ್ಥೆಗೆ ಅಲ್ಲಿ ಅಳವಡಿಸಿಕೊಂಡಿರುವ ’ಆಲ್‌ಗ್ರಿಪ್ ಸೆಲೆಕ್ಟ್‌’ನಂಥ ಫೀಚರ್‌ಗಳನ್ನು ಎಸ್‌-ಕ್ರಾಸ್‌ಗೆ ಅಳವಡಿಸಲಾಗಿದೆ. ಚಾಲನಾ ಪರಿಸ್ಥಿತಿಗಳಿಗೆ ತಕ್ಕಂತೆ ಡ್ರೈವಿಂಗ್ ಮೋಡ್ ಆಯ್ದುಕೊಳ್ಳಲು ಡಯಲ್ ಒಂದನ್ನು ಈ ಕಾರಿನಲ್ಲಿ ಕೊಡಲಾಗಿದೆ. ಈ ಮೂಲಕ ಹಿಮದ ನಡುವೆ ತೆರಳುವಾಗ, ಇಂಧನ ಕಡಿಮೆ ಇರುವಾಗ ಸೇರಿದಂತೆ ಅನೇಕ ಪರಿಸ್ಥಿತಿಗಳಿಗೆ ತಕ್ಕಂತೆ ನಮ್ಮ ಆದ್ಯತೆಗಳನ್ನು ಬದಲಿಸಿಕೊಳ್ಳಲು ಅನುಕೂಲವಾಗಲಿದೆ.

ಐದು ಬಾಗಿಲಿನ ಜಿಮ್ನಿ

ಜಿಮ್ನಿ ಕಾರಿನ ಐದು ಬಾಗಿಲಿನ ಅವತಾರದ ಮೇಲೆ ಮಾರುತಿ ಸುಜ಼ುಕಿ ಕೆಲಸ ಆರಂಭಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರು ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆ ಇದೆ. ಐದು ಬಾಗಿಲಿನ ಈ ಕಾರು ಮೂರು ಬಾಗಿಲಿನ ಕಾರಿನ ವಾಸ್ತವಿಕ ಅವತಾರವಾಗಿದೆ. 1.5 ಲೀಟರ್‌ ಪೆಟ್ರೋಲ್ ಇಂಜಿನ್‌ನೊಂದಿಗೆ ಬರಲಿರುವ ಹೊಸ ಜಿಮ್ನಿ ಕಾರಿನಲ್ಲಿ 4×4 ಡ್ರೈವ್‌ಟ್ರೇನ್‌‌ನ ಲಭ್ಯತೆ ಇರುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...