alex Certify ಮಹೀಂದ್ರಾ ಎಲೆಕ್ಟ್ರಿಕ್ ಹೊಸ​ ಎಸ್.​ಯು.ವಿ. ಹೆಸರು ಲೀಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹೀಂದ್ರಾ ಎಲೆಕ್ಟ್ರಿಕ್ ಹೊಸ​ ಎಸ್.​ಯು.ವಿ. ಹೆಸರು ಲೀಕ್

ಮಹೀಂದ್ರಾ ಹಲವಾರು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದರೊಂದಿಗೆ ಭಾರತೀಯ ಎಲೆಕ್ಟ್ರಿಕ್​ ಕಾರು ಮಾರುಕಟ್ಟೆಯಲ್ಲಿ ದೊಡ್ಡದಾಗಿ ಎಂಟ್ರಿ‌ ಕೊಡಲು ಯೋಜಿಸುತ್ತಿದೆ.
ಮಹೀಂದ್ರ 5 ಎಲೆಕ್ಟ್ರಿಕ್​ ಎಸ್.ಯು.ವಿ.ಗಳನ್ನು ಬಹಿರಂಗಪಡಿಸಲು ಯೋಜಿಸುತ್ತಿದ್ದು, ಈ ಎಸ್.ಯು.ವಿ.ಗಳನ್ನು ಪ್ರತಾಪ್​ ಬೋಸ್​ ನೇತೃತ್ವದ ಮಹೀಂದ್ರಾ ಅಡ್ವಾನ್ಸ್​ ಡಿಸೈನ್​ ಯುರೋಪ್​ ವಿನ್ಯಾಸಗೊಳಿಸಿದೆ.

ಎಸ್.ಯು.ವಿ.ಗಳ ಕುರಿತು ಯಾವುದೇ ಅಧಿಕೃತ ಬಹಿರಂಗಪಡಿಸುವ ಮೊದಲು, ಸಂಭವನೀಯ ಹೆಸರುಗಳು ಆನ್​ಲೈನ್​ನಲ್ಲಿ ಸೋರಿಕೆಯಾಗಿವೆ. ಕಂಪನಿಯು ಸಲ್ಲಿಸಿದ ಟ್ರೇಡ್​ಮಾರ್ಕ್​ಗಳ ಪ್ರಕಾರ, ಎಕ್ಸ್​ಯುವಿ ಇ1, ಎಸ್​ಯುವಿ ಇ2, ಎಸ್​ಯುವಿ ಇ 3, ಎಸ್​ಯುವಿ ಇ 5, ಎಸ್​ಯುವಿ ಇ 6, ಎಸ್​ಯುವಿ ಇ 7, ಎಸ್​ಯುವಿ ಇ 8 ಮತ್ತು ಎಸ್​ಯುವಿ ಇ 9 ಎಂದು ಹೆಸರಿಸಬಹುದು. ಟ್ರೇಡ್​ಮಾರ್ಕ್​ ಹೆಸರುಗಳಲ್ಲಿ 4ನೇ ಸಂಖ್ಯೆಯನ್ನು ಹೊಂದಿರುವ ಹೆಸರನ್ನು ಸರಣಿಯಿಂದ ಹೊರಗಿಡಲಾಗಿದೆ.

ಮಹೀಂದ್ರಾ ಹೊಸ ಎಲೆಕ್ಟ್ರಿಕ್​ ಎಸ್​ಯುವಿಗಳ ವೈಶಿಷ್ಟ್ಯಗಳು ಮತ್ತು ಇಂಟೀರಿಯರ್​ಗೆ ಬಳಕೆದಾರರಿಗೆ ಒಂದು ಸ್ನೀಕ್​ ಪೀಕ್​ ಅನ್ನು ನೀಡಿದೆ. ಇ-ಎಸ್​ಯುವಿಗಳು ಸುಖಾಸೀನ ಸೀಟುಗಳು ಬಳಕೆದಾರರ ಆದ್ಯತೆಗಳಿಗೆ ಸರಿಹೊಂದಿಸಬಹುದಾಗಿದೆ. ಹವಾನಿಯಂತ್ರಣಕ್ಕಾಗಿ ವೈಯಕ್ತಿಕ ಬಳಕೆದಾರ ಸೆಟ್ಟಿಂಗ್​ಗಳು ಇದ್ದು, ಪ್ರತಿಯೊಬ್ಬ ಪ್ರಯಾಣಿಕರು ಆರಾಮದಾಯಕವೆಂದು ಖಚಿತಪಡಿಸುತ್ತದೆ. ಟರ್ನ್​ ಬೈ ಟರ್ನ್​ ನ್ಯಾವಿಗೇಶನ್​, ಯೂಸರ್​ ಕಾಲ್​, ಟೆಕ್ಟ್ಸ್​, ಮ್ಯೂಸಿಕ್​ ಬಗ್ಗೆ ಹೊಸ ಫೀಚರ್​ಗಳಿರಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...