ಮಹೀಂದ್ರಾ ಹಲವಾರು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದರೊಂದಿಗೆ ಭಾರತೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ದೊಡ್ಡದಾಗಿ ಎಂಟ್ರಿ ಕೊಡಲು ಯೋಜಿಸುತ್ತಿದೆ.
ಮಹೀಂದ್ರ 5 ಎಲೆಕ್ಟ್ರಿಕ್ ಎಸ್.ಯು.ವಿ.ಗಳನ್ನು ಬಹಿರಂಗಪಡಿಸಲು ಯೋಜಿಸುತ್ತಿದ್ದು, ಈ ಎಸ್.ಯು.ವಿ.ಗಳನ್ನು ಪ್ರತಾಪ್ ಬೋಸ್ ನೇತೃತ್ವದ ಮಹೀಂದ್ರಾ ಅಡ್ವಾನ್ಸ್ ಡಿಸೈನ್ ಯುರೋಪ್ ವಿನ್ಯಾಸಗೊಳಿಸಿದೆ.
ಎಸ್.ಯು.ವಿ.ಗಳ ಕುರಿತು ಯಾವುದೇ ಅಧಿಕೃತ ಬಹಿರಂಗಪಡಿಸುವ ಮೊದಲು, ಸಂಭವನೀಯ ಹೆಸರುಗಳು ಆನ್ಲೈನ್ನಲ್ಲಿ ಸೋರಿಕೆಯಾಗಿವೆ. ಕಂಪನಿಯು ಸಲ್ಲಿಸಿದ ಟ್ರೇಡ್ಮಾರ್ಕ್ಗಳ ಪ್ರಕಾರ, ಎಕ್ಸ್ಯುವಿ ಇ1, ಎಸ್ಯುವಿ ಇ2, ಎಸ್ಯುವಿ ಇ 3, ಎಸ್ಯುವಿ ಇ 5, ಎಸ್ಯುವಿ ಇ 6, ಎಸ್ಯುವಿ ಇ 7, ಎಸ್ಯುವಿ ಇ 8 ಮತ್ತು ಎಸ್ಯುವಿ ಇ 9 ಎಂದು ಹೆಸರಿಸಬಹುದು. ಟ್ರೇಡ್ಮಾರ್ಕ್ ಹೆಸರುಗಳಲ್ಲಿ 4ನೇ ಸಂಖ್ಯೆಯನ್ನು ಹೊಂದಿರುವ ಹೆಸರನ್ನು ಸರಣಿಯಿಂದ ಹೊರಗಿಡಲಾಗಿದೆ.
ಮಹೀಂದ್ರಾ ಹೊಸ ಎಲೆಕ್ಟ್ರಿಕ್ ಎಸ್ಯುವಿಗಳ ವೈಶಿಷ್ಟ್ಯಗಳು ಮತ್ತು ಇಂಟೀರಿಯರ್ಗೆ ಬಳಕೆದಾರರಿಗೆ ಒಂದು ಸ್ನೀಕ್ ಪೀಕ್ ಅನ್ನು ನೀಡಿದೆ. ಇ-ಎಸ್ಯುವಿಗಳು ಸುಖಾಸೀನ ಸೀಟುಗಳು ಬಳಕೆದಾರರ ಆದ್ಯತೆಗಳಿಗೆ ಸರಿಹೊಂದಿಸಬಹುದಾಗಿದೆ. ಹವಾನಿಯಂತ್ರಣಕ್ಕಾಗಿ ವೈಯಕ್ತಿಕ ಬಳಕೆದಾರ ಸೆಟ್ಟಿಂಗ್ಗಳು ಇದ್ದು, ಪ್ರತಿಯೊಬ್ಬ ಪ್ರಯಾಣಿಕರು ಆರಾಮದಾಯಕವೆಂದು ಖಚಿತಪಡಿಸುತ್ತದೆ. ಟರ್ನ್ ಬೈ ಟರ್ನ್ ನ್ಯಾವಿಗೇಶನ್, ಯೂಸರ್ ಕಾಲ್, ಟೆಕ್ಟ್ಸ್, ಮ್ಯೂಸಿಕ್ ಬಗ್ಗೆ ಹೊಸ ಫೀಚರ್ಗಳಿರಲಿವೆ.