alex Certify ಈ ವರ್ಷ ಬಿಡುಗಡೆಯಾಗಲಿವೆ ಈ 5 ಎಲೆಕ್ಟ್ರಿಕ್‌ ಕಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವರ್ಷ ಬಿಡುಗಡೆಯಾಗಲಿವೆ ಈ 5 ಎಲೆಕ್ಟ್ರಿಕ್‌ ಕಾರು

ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಟ್ರೆಂಡ್ ವ್ಯಾಪಕವಾಗುತ್ತಿದೆ. ಆಂತರಿಕ ದಹನ ಇಂಜಿನ್ ವಾಹನಗಳ ಬದಲಿಗೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಜನರು ವಾಲುತ್ತಿರುವುದು ಕಳೆದ ಕೆಲ ವರ್ಷಗಳಿಂದ ಸ್ಪಷ್ಟವಾಗಿ ಗೋಚರವಾಗುತ್ತಿದೆ.

2022ರಲ್ಲಿ ಲಾಂಚ್‌ ಆಗಲಿರುವ ಎಲೆಕ್ಟ್ರಿಕ್ ಕಾರುಗಳ ಪೈಕಿ ಟಾಪ್ ಮಾಡೆಲ್‌ಗಳ ವಿವರ ಇಂತಿದೆ:

1. ಟಾಟಾ ಆಲ್ಟ್ರೋಜ಼್‌ ಇವಿ

Tata Altroz EV at the Geneva Motor Show 2019

ಜಿನೆವಾ ಮೋಟರ್‌ ಶೋ 2019ರಲ್ಲಿ ಪ್ರದರ್ಶಿಸಲ್ಪಟ್ಟ ಟಾಟಾ ಆಲ್ಟ್ರೋಜ಼್‌‌ ಒಂದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು. ಪೆಟ್ರೋಲ್/ಡೀಸೆಲ್ ಚಾಲಿತ ತನ್ನದೇ ಮತ್ತೊಂದು ಅವತಾರದಂತೆಯೇ ಕಾಣುವ ಆಲ್ಟ್ರೋಜ಼್‌ ಇವಿ. ಆಲ್ಟ್ರೋಜ಼್‌‌ನಲ್ಲಿರುವ ಎಲೆಕ್ಟ್ರಿಕ್ ಪವರ್‌‌ಟ್ರೇನ್‌ ಕುರಿತು ಜನರಿಗೆ ಅಷ್ಟಾಗಿ ಗೊತ್ತಿಲ್ಲ. ಆದರೂ ಸಹ ಒಂದು ಸಿಂಗಲ್ ಚಾರ್ಜ್ ಮೇಲೆ 250ಕಿಮೀ ಚಾಲನಾ ವ್ಯಪ್ತಿಯನ್ನು ಈ ಕಾರು ನೀಡಲಿದೆ ಎಂದು ಹೇಳಲಾಗಿದೆ.

2. ವೋಲ್ವೋ ಎಕ್ಸ್‌ಸಿ40 ರೀಚಾರ್ಜ್

Volvo XC40 Recharge electric SUV arriving in India next year

ವೋಲ್ವೋ ಎಕ್ಸ್‌ಸಿ40 ರೀಚಾರ್ಜ್ ಭಾರತದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಪ್ರದರ್ಶಿಸಲ್ಪಟ್ಟಿದೆ. ಆದರೆ ಈ ಎಲೆಕ್ಟ್ರಿಕ್ ಎಸ್‌ಯುವಿಯ ಲಾಂಚ್‌ ಅನ್ನು ಒಂದು ವರ್ಷದ ಮಟ್ಟಿಗೆ ತಡ ಮಾಡಲಾಗಿದೆ, ಬಹುಶಃ ಇದಕ್ಕೆ ಸೆಮಿಕಂಡಕ್ಟರ್‌ ಕೊರತೆ ಕಾರಣ ಇರಬಹುದು.

ವೋಲ್ವೋ ಎಕ್ಸ್‌ಸಿ40 ರೀಚಾರ್ಜ್ 78ಕಿವ್ಯಾ ಬ್ಯಾಟರಿ ಪ್ಯಾಕ್ ಹೊಂದಿದ್ದು, ಎರಡು ಎಲೆಕ್ಟ್ರಿಕ್ ಮೋಟರ್‌ಗಳು 402ಬಿಚ್‌ಪಿ ಮತ್ತು 660ಎನ್‌ಎಂ ಟಾರ್ಕ್‌ನಷ್ಟು ಶಕ್ತಿ ಉತ್ಪಾದಿಸಬಲ್ಲವು. ಒಂದು ಚಾರ್ಜ್ ಮೇಲೆ 418ಕಿಮೀಗಳ ಚಾಲನಾ ವ್ಯಾಪ್ತಿಯನ್ನು ಈ ಎಲೆಕ್ಟ್ರಿಕ್ ಎಸ್‌ಯುವಿ ನೀಡುವ ಅಂದಾಜಿದೆ.

3. ಮಿನಿ ಕೂಪರ್‌ ಎಸ್‌ಇ

Fully electric MINI Cooper SE

ಮಿನಿ ಕೂಪರ್‌ ಎಸ್‌ಇಯನ್ನು ಜುಲೈ 2019ರಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾಗಿದ್ದು, ಅಕ್ಟೋಬರ್‌ನಿಂದ ಭಾರತದಲ್ಲಿ ಬುಕಿಂಗ್‌ಗೆ ಲಭ್ಯವಿದೆ. ಮಿನಿಯಿಂದ ಬಿಡುಗಡೆಯಾದ ಮೊಟ್ಟ ಮೊದಲ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌‌ ಬುಕಿಂಗ್‌ ಆರಂಭಗೊಂಡ ಎರಡೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆಗಿದೆ.

32.6ಕಿವ್ಯಾ ಬ್ಯಾಟರಿ ಪ್ಯಾಕ್ ಹೊಂದಿರುವ ಈ ಕಾರು 181ಬಿಚ್‌ಪಿ ಮತ್ತು 270ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲ ಶಕ್ತಿ ಹೊಂದಿದೆ. ಒಂದು ಚಾರ್ಜ್ ಮೇಲೆ 234ಕಿಮೀಗಳ ಮೈಲೇಜ್ ನೀಡುವ ಅಂದಾಜು ಈ ಕಾರಿನ ಬ್ಯಾಟರಿಯದ್ದು.

4. ಟೆಸ್ಲಾ ಮಾಡೆಲ್ 3

Tesla Model 3 spotted testing in India ahead of launch

ಭಾರತೀಯ ಮಾರುಕಟ್ಟೆಗೆ ಮತ್ತೊಂದು ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿರುವ ಟೆಸ್ಲಾ, ತನ್ನ ಎಲೆಕ್ಟ್ರಿಕ್ ಸೆಡಾನ್ ಟೆಸ್ಲಾ ಮಾಡೆಲ್ 3 ಅನ್ನು ದೇಶದಲ್ಲಿ ಅದಾಗಲೇ ಅನೇಕ ಬಾರಿ ಪ್ರಯೋಗಾರ್ಥ ಪರೀಕ್ಷೆಗೆ ಒಳಪಡಿಸಿದೆ.

ಎರಡು ಎಲೆಕ್ಟ್ರಿಕ್ ಮೋಟರ್‌ಗಳನ್ನು ಬಳಸುವ ಟೆಸ್ಲಾ ಮಾಡೆಲ್ 3, ಒಂದು ಪೂರ್ಣ ಚಾರ್ಜ್ ಮೇಲೆ 402.3ಕಿಮೀ ದೂರ ಸಾಗಬಲ್ಲದು. ಟೆಸ್ಲಾ ಮಾಡೆಲ್ 3ನ ಲಾಂಗ್ ರೇಂಜ್ ಎಡಬ್ಲ್ಯೂಡಿ ಅವತಾರಿ ಕಾರು ಒಂದು ಚಾರ್ಜ್ ಮೇಲೆ 518ಕಿಮೀಗಳಷ್ಟು ದೂರ ಸಾಗಬಲ್ಲದು.

5. ಮರ್ಸಿಡಿಸ್ ಬೆಂಜ಼್‌ ಇಕ್ಯೂಎಸ್‌

Mercedes-Benz EQS India launch soon; listed on official website

ದೇಶದಲ್ಲಿ ಮೊದಲಿಗೆ ಲಾಂಚ್‌ ಆದ ಎಲೆಕ್ಟ್ರಿಕ್ ಎಸ್‌ಯುವಿ ಆಗಿರುವ ಮರ್ಸಿಡಿಸ್ ಬೆಂಜ಼್‌ ಇಕ್ಯೂಎಸ್‌ನ ಬೆಲೆಯ ಒಂದು ಕೋಟಿ ರೂ.ಗಳಷ್ಟಿದೆ. ಒಮ್ಮೆ ಚಾರ್ಜ್ ಮಾಡಿದರೆ 450ಕಿಮೀ ದೂರ ಚಲಿಸಬಲ್ಲ ಇಕ್ಯೂಸಿ, 400ಬಿಚ್‌ಪಿ ಮತ್ತು 760ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲ ಇಂಜಿನ್‌ನ ಬಲ ಹೊಂದಿದೆ.

ಇಕೋ, ಕಂಫರ್ಟ್, ಸ್ಪೋರ್ಟ್ ಮತ್ತು ಇಂಡಿವಿಶುವಲ್ ಎಂಬ ನಾಲ್ಕು ಭಿನ್ನ ಡ್ರೈವಿಂಗ್ ಮೋಡ್‌ಗಳಲ್ಲಿ ಬರುವ ಮರ್ಸಿಡಿಸ್ ಬೆಂಜ಼್‌ ಇಕ್ಯೂಸಿಯ ಬ್ಯಾಟರಿಯನ್ನು ಪೂರ್ತಿ ಚಾರ್ಜ್ ಮಾಡಲು 10 ಗಂಟೆಗಳ ಅವಧಿ ಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...