alex Certify ಕ್ಲಾಸಿಕ್ ಲೆಜೆಂಡ್ಸ್ ನಿಂದಿಡಿದು ಟೈಗರ್ 1200, ಇಲ್ಲಿದೆ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿರುವ ಬೈಕ್ ಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಲಾಸಿಕ್ ಲೆಜೆಂಡ್ಸ್ ನಿಂದಿಡಿದು ಟೈಗರ್ 1200, ಇಲ್ಲಿದೆ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿರುವ ಬೈಕ್ ಗಳ ಪಟ್ಟಿ

ಭಾರತೀಯ ಮೋಟಾರ್ ಉದ್ಯಮವು 2022 ರಲ್ಲಿ ಹೊಸ ಅಲೆ ಕಾಣಲಿದೆ. ಬಹಳಷ್ಟು ಹೊಸ ಮತ್ತು ಅತ್ಯುತ್ತಮ ಉತ್ಪನ್ನ ಬಿಡುಗಡೆಗಳೊಂದಿಗೆ ಈ ವರ್ಷ ಪ್ರಾರಂಭಿವಾಗುತ್ತಿದೆ. ಈ ತಿಂಗಳಿನಲ್ಲಿ ಯಾವೆಲ್ಲಾ ದ್ವಿಚಕ್ರ ವಾಹನಗಳು ಭಾರತೀಯ ಮಾರ್ಕೆಟ್ ಗೆ ಲಗ್ಗೆ ಇಡಲಿವೆ ಎಂದು ಇಲ್ಲಿ ತಿಳಿದುಕೊಳ್ಳಿ.

ಯೆಜ್ಡಿ ರೋಡ್‌ ಕಿಂಗ್ ಮತ್ತು ADV

ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ಸ್ ಭಾರತದಲ್ಲಿ ಐಕಾನಿಕ್ ಯೆಜ್ಡಿ ಬ್ರ್ಯಾಂಡ್ ಗೆ ಪುನರ್ ಜೀವ ನೀಡಲು ಸಿದ್ಧವಾಗಿದೆ. ಹೊಸ ಯೆಜ್ಡಿ ಮೋಟಾರ್‌ಸೈಕಲ್‌ಗಳನ್ನು ಜನವರಿ 13, 2022 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಕಂಪನಿಯು ಎರಡು ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅವುಗಳಲ್ಲಿ ಒಂದು ರೆಟ್ರೋ ಕ್ಲಾಸಿಕ್ ಬೈಕ್ ಆಗಿದ್ದರೆ ಇನ್ನೊಂದು ಅಡ್ವಾನ್ಸ್ಡ್ ಆಗಿರುತ್ತದೆ.

Honda CB300R

ಹೋಂಡಾ CB300R BS6

ಹೋಂಡಾ CB300R ನ BS6 ಕಂಪ್ಲೈಂಟ್ ಆವೃತ್ತಿಯನ್ನು ಡಿಸೆಂಬರ್ 2021 ರಲ್ಲಿ ಇಂಡಿಯಾ ಬೈಕ್ ವೀಕ್‌ನಲ್ಲಿ ಅನಾವರಣಗೊಂಡಿದೆ. ಈ ಬೈಕ್ ಅನ್ನು ಈ ತಿಂಗಳು ಬಿಡುಗಡೆ ಮಾಡಲಾಗುವುದು. CB300R ನ BS6/Euro-5 ಆವೃತ್ತಿಯನ್ನು ಪಡೆಯುವ ಮೊದಲ ದೇಶ ಭಾರತವಾಗಿದೆ.

KTM RC 390

ನ್ಯೂ-ಜೆನ್ KTM RC 390

ಅಕ್ಟೋಬರ್ 2021 ರಲ್ಲಿ ಹೊಸ RC 125 ಮತ್ತು RC 200 ಅನ್ನು ಬಿಡುಗಡೆ ಮಾಡಿದ ನಂತರ, ಈಗ KTM ಇಂಡಿಯಾ ಈ ತಿಂಗಳು ದೇಶದಲ್ಲಿ ಹೊಸ ತಲೆಮಾರಿನ RC 390 ಅನ್ನು ಪರಿಚಯಿಸಲು ಸಿದ್ಧವಾಗಿದೆ. 2022 ರ KTM RC 390 ಹೊಸ ವೈಶಿಷ್ಟ್ಯಗಳೊಂದಿಗೆ, ಕಾಸ್ಮೆಟಿಕ್ ನವೀಕರಣಗಳನ್ನು ಪಡೆದಿದೆ.‌

Triumph Tiger 660

ಟ್ರಯಂಫ್ ಟೈಗರ್ ಸ್ಪೋರ್ಟ್ 660

ಟ್ರಯಂಫ್ ಮೋಟಾರ್‌ಸೈಕಲ್ಸ್ ಶೀಘ್ರದಲ್ಲೇ ಹೊಸ ಟೈಗರ್ ಸ್ಪೋರ್ಟ್ 660 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದಕ್ಕಾಗಿ ಬುಕ್ಕಿಂಗ್‌ಗಳು ಈಗಾಗಲೇ ತೆರೆದಿದ್ದು, 50,000 ರೂಪಾಯಿಗಳ ಟೋಕನ್ ಮೊತ್ತವನ್ನು ಪಾವತಿಸಿ ಈ ಮೋಟಾರ್‌ಸೈಕಲ್ ಅನ್ನು ಬುಕ್ ಮಾಡಬಹುದು.

ಟ್ರಯಂಫ್ ಟೈಗರ್ 1200

ಅಂತಿಮವಾಗಿ, ಈ ಪಟ್ಟಿಯಲ್ಲಿನ ಕೊನೆಯ ಮೋಟಾರ್‌ಸೈಕಲ್ ಯುಕೆಯ, ಟೈಗರ್ 1200. ಇತ್ತೀಚೆಗೆ ಇಡೀ ವಿಶ್ವಕ್ಕೆ ಪರಿಚಯವಾಗಿರುವ ಹೊಸ ಟ್ರಯಂಫ್ ಟೈಗರ್ 1200, ಈಗ ಭಾರತಕ್ಕೆ ಲಗ್ಗೆ ಇಟ್ಟಿದೆ. ಅಷ್ಟಕ್ಕು, ಟೈಗರ್ 1200 ಗೆ ಈಗಾಗಲೇ ಅಡ್ವಾನ್ಸ್ ಬುಕಿಂಗ್‌ಗಳು ಶುರುವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...