alex Certify ಹಾಡು ಕೇಳಲು ಮೊಬೈಲ್ ಫೋನ್ ಕೇಳಿದ ಪತಿ, ಕೊಡಲ್ಲ ಎಂದು ಕತ್ತರಿಯಿಂದ ಕಣ್ಣಿಗೆ ಚುಚ್ಚಿದ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡು ಕೇಳಲು ಮೊಬೈಲ್ ಫೋನ್ ಕೇಳಿದ ಪತಿ, ಕೊಡಲ್ಲ ಎಂದು ಕತ್ತರಿಯಿಂದ ಕಣ್ಣಿಗೆ ಚುಚ್ಚಿದ ಪತ್ನಿ

ಬಾಗ್ಪತ್: ಹಾಡುಗಳನ್ನು ಕೇಳಲು ಮೊಬೈಲ್ ಫೋನ್ ಕೇಳಿದ ಪತಿ ಕಣ್ಣಿಗೆ ಪತ್ನಿ ಕತ್ತರಿಯಿಂದ ಚುಚ್ಚಿದ್ದಾಳೆ. ಬರೌತ್ ಪೊಲೀಸ್ ಠಾಣಾ ವ್ಯಾಪ್ತಿಯ ಹೌಸಿಂಗ್ ಡೆವಲಪ್‌ಮೆಂಟ್ ಕಾಲೋನಿಯಲ್ಲಿ ಘಟನೆ ನಡೆದಿದೆ.

ಈ ಕುರಿತು ಮಾಹಿತಿ ನೀಡಿದ ಸರ್ಕಲ್ ಆಫೀಸರ್(ಸಿಒ) ಸವಿರತ್ನ ಗೌತಮ್, ಘಟನೆಗೆ ಸಂಬಂಧಿಸಿದಂತೆ ಅಂಕಿತ್ ಅವರು ತನ್ನ ಪತ್ನಿ ಪ್ರಿಯಾಂಕಾ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

ಅಂಕಿತ್ ಯೂಟ್ಯೂಬ್‌ನಲ್ಲಿ ಹಾಡುಗಳನ್ನು ಕೇಳಲು ಪ್ರಿಯಾಂಕಾ ಅವರ ಮೊಬೈಲ್ ಫೋನ್ ಕೇಳಿದ್ದರು. ಪತ್ನಿ ಮೊಬೈಲ್ ನೀಡಲು ನಿರಾಕರಿಸಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಪ್ರಿಯಾಂಕಾ ಅಂಕಿತ್ ಕಣ್ಣಿಗೆ ಚಾಕುವಿನಿಂದ ಇರಿದಿದ್ದಾಳೆ ಎನ್ನಲಾಗಿದೆ.

ಅಂಕಿತ್ ಕುಟುಂಬದವರು ಆತನನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...