alex Certify ಜೂಜು ಚಟಕ್ಕೆ ಬಿದ್ದು ತನ್ನನ್ನೇ ಪಣಕ್ಕಿಟ್ಟುಕೊಂಡ ಮಹಿಳೆ….! ಪತಿಯಿಂದ ಪೊಲೀಸರಿಗೆ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೂಜು ಚಟಕ್ಕೆ ಬಿದ್ದು ತನ್ನನ್ನೇ ಪಣಕ್ಕಿಟ್ಟುಕೊಂಡ ಮಹಿಳೆ….! ಪತಿಯಿಂದ ಪೊಲೀಸರಿಗೆ ದೂರು

ಜೈಪುರ: ಬಾಜಿ ಕಟ್ಟಲು ಹಣವಿಲ್ಲದ ಕಾರಣ ಮಹಿಳೆಯೊಬ್ಬಳು ಜಮೀನುದಾರನಿಗೆ ತನ್ನನ್ನು ತಾನು ಪಣಕ್ಕಿಟ್ಟುಕೊಂಡಿರುುವ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ರೇಣು ಎಂಬ ಉತ್ತರಪ್ರದೇಶದ ಮಹಿಳೆ ರಾಜಸ್ಥಾನದ ಜೈಪುರದಲ್ಲಿ ಕೆಲಸಕ್ಕೆ ಇದ್ದಳು. ಈಕೆಗೆ ಪತಿ ಹಣ ಕಳುಹಿಸುತ್ತಿದ್ದ. ಆ ಹಣದಲ್ಲಿ ಜೂಜಿನ ಚಟ ಅಂಟಿಸಿಕೊಂಡಿದ್ದಳು ರೇಣು. ನಗರ ಕೊತ್ವಾಲಿಯ ದೇವಕಲಿ ಪ್ರದೇಶದಲ್ಲಿ ದಿನವೂ ತನ್ನ ಜಮೀನುದಾರನೊಟ್ಟಿಗೆ ಲುಡೋ ಆಡುತ್ತಿದ್ದಳು.

ಪತಿ ಕಳುಹಿಸಿದ ಸಂಪೂರ್ಣ ಹಣ ಖಾಲಿಯಾಯಿತು. ಆದರೆ ಜೂಜಿನ ಚಟಕ್ಕೆ ಬಲಿಯಾದ ಈಕೆ ಕೊನೆಗೆ ತನ್ನನ್ನೇ ಪಣಕ್ಕೆ ಒಡ್ಡಿಕೊಂಡಳು. ಜೂಜಿನಲ್ಲಿ ಸೋತಳು. ನಂತರ ಆಗಿದ್ದೆಲ್ಲಾ ಕಹಿ ಘಟನೆಗಳೇ.

ಈ ಕುರಿತು ಆಕೆ ತನ್ನ ಪತಿಗೆ ಕರೆ ಮಾಡಿ ನಡೆದ ಘಟನೆಯನ್ನೆಲ್ಲಾ ಹೇಳಿದ್ದಾಳೆ. ಆಕೆಯ ಪತಿ ಪ್ರತಾಪಗಢಕ್ಕೆ ಬಂದು ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಘಟನೆಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದೀಗ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...