alex Certify ಬಡ ವಿದ್ಯಾರ್ಥಿ ಅದ್ಬುತ ಸಾಧನೆಗೆ ಮೆಚ್ಚುಗೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ ವಿದ್ಯಾರ್ಥಿ ಅದ್ಬುತ ಸಾಧನೆಗೆ ಮೆಚ್ಚುಗೆಗಳ ಮಹಾಪೂರ

ಲಕ್ಷಾಂತರ ವಿದ್ಯಾರ್ಥಿಗಳಂತೆ ಉತ್ತರ ಪ್ರದೇಶದ ಪುಟ್ಟ ಹಳ್ಳಿಯೊಂದರ ನಿವಾಸಿ 18 ವರ್ಷದ ಮನು ಚೌಹಾಣ್​​ 12ನೇ ತರಗತಿ ಫಲಿತಾಂಶಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಅವರಿಗೆ ಫಲಿತಾಂಶದ ಬಗ್ಗೆ ಹೆಚ್ಚು ಚಿಂತೆಯಿಲ್ಲ. ಏಕೆಂದರೆ ಮನು ಚೌಹಾಣ್​​ ಸ್ಟ್ಯಾನ್​ಫೋರ್ಡ್ ವಿಶ್ವವಿದ್ಯಾಲಯದಲ್ಲಿ 100 ಪ್ರತಿಶತ ವಿದ್ಯಾರ್ಥಿವೇತನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ರಬಾದ್​​ನ ಇನ್ಶೂರೆನ್ಸ್ ಸೇಲ್ಸ್​ಮನ್​ನ ಪುತ್ರನಾಗಿರುವ ಮನುಗೆ ಸ್ಟ್ಯಾನ್​ಫೋರ್ಡ್​ನಿಂದ ವಿದ್ಯಾರ್ಥಿವೇತನ ಪಡೆಯುವುದು ಅಷ್ಟೊಂದು ಸುಲಭದ ಕೆಲಸವಂತೂ ಆಗಿರಲಿಲ್ಲ. ಈತನ ಕನಸುಗಳನ್ನ ಬೆಂಬಲಿಸಲು ಪೋಷಕರ ಬಳಿ ಆರ್ಥಿಕ ಶಕ್ತಿ ಕೂಡ ಇರಲಿಲ್ಲ. ಆದರೂ ಸಹ ಈತ ತನ್ನ ಆಕಾಂಕ್ಷೆಗಳನ್ನ ಸಾಕಾರಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಮನು, ಸ್ಟ್ಯಾನ್​​ಫೋರ್ಡ್​ನಲ್ಲಿ ಉತ್ತಮ ಸಂಶೋಧನಾ ಸೌಲಭ್ಯಗಳನ್ನ ಹೊಂದಿದೆ ಎಂಬ ಕಾರಣಕ್ಕೆ ನಾನು ಅರ್ಜಿ ಸಲ್ಲಿಕೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ದೀನದಲಿತ ಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಅಭಿಲಾಷೆ ಹೊಂದಿದ್ದೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...