alex Certify ಹುಡುಗಿಯರಿಗೆ ಚುಡಾಯಿಸಿದ ಯುವಕರಿಗೆ ಗ್ರಾಮಸ್ಥರಿಂದ ಧರ್ಮದೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗಿಯರಿಗೆ ಚುಡಾಯಿಸಿದ ಯುವಕರಿಗೆ ಗ್ರಾಮಸ್ಥರಿಂದ ಧರ್ಮದೇಟು

ಹುಡುಗಿರಯನ್ನು ಚುಡಾಯಿಸುತ್ತಿದ್ದರು ಎಂಬ ಆಪಾದನೆ ಮೇಲೆ ಮೂವರು ಹುಡುಗರನ್ನು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ ಜಿಲ್ಲೆಯಲ್ಲಿ ವರದಿಯಾಗಿದೆ.

ಬುಧವಾರ ರಾತ್ರಿ ಈ ಘಟನೆ ಜರುಗಿದೆ. ಬಳಿಕ ಹುಡುಗಿಯೊಬ್ಬರ ತಂದೆ ಹುಡುಗರ ವಿರುದ್ಧ ದೂರು ಕೊಟ್ಟಿದ್ದಾರೆ.

ಬೇರೊಂದು ಕೋಮಿನ ಹುಡುಗರು ತಮ್ಮ ಪ್ರದೇಶಕ್ಕೆ ಪದೇ ಪದೇ ಭೇಟಿ ನೀಡುತ್ತಾ, ಹುಡುಗಿಯರಿಗೆ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿರುವ ಈತ, “ಕಳೆದ ರಾತ್ರಿ ನನ್ನ ಮಗಳು ಮನಗೆ ಮರಳುತ್ತಿದ್ದ ವೇಳೆ, ಆಕೆಗೆ ಹುಡುಗರು ಕಿರುಕುಳ ಕೊಡಲು ಮುಂದಾಗಿದ್ದಲ್ಲದೇ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆಯನ್ನೂ ಒಡ್ಡಿದ್ದರು,” ಎಂದಿದ್ದಾರೆ.

ಕೊರೊನಾ ಕಾಲದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಕುರಿತು ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ದೂರಿನ ಅನ್ವಯ ಪೊಲೀಸರು ಐಪಿಸಿಯ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಯತ್ನ) ಮತ್ತು 323 (ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು) ಹಾಗೂ ಎಸ್‌ಸಿ/ಎಸ್‌ಟಿ ಕಾಯಿದೆಯ ವಿಧಿಗಳ ಅಡಿ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಯುವಕರನ್ನು ಪೊಲೀಸರು ಬಂಧಿಸಿ ರಕ್ಷಿಸುವವರೆಗೂ ಸ್ಥಳೀಯರು ಅವರ ಮೇಲೆ ಥಳಿಸಿದ್ದಾರೆ.

ಯುವಕರಲ್ಲಿ ಒಬ್ಬನ ತಾಯಿ ಪ್ರತಿದೂರು ಕೊಟ್ಟಿದ್ದು, ತನ್ನ ಮಗನನ್ನು ಮಾರುಕಟ್ಟೆ ಪ್ರದೇಶದಿಂದ ಹುಡುಗಿಯ ಸಂಬಂಧಿಕರೊಬ್ಬರು ಅಪಹರಿಸಿ ಗಂಟೆಗಟ್ಟಲೇ ಥಳಿಸಿದ್ದಾರೆ ಎಂದಿದ್ದಾರೆ. ಹುಡುಗಿಯೊಬ್ಬಳು ಹುಡುಗರಿಗೆ ಹೊಡೆಯುತ್ತಿರುವ ವಿಡಿಯೋ ವೈರಲ್‌ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...