alex Certify ಶಾಕಿಂಗ್: ಎದುರಾಳಿ‌ ಮಹಿಳೆ ಸೀರೆ ಎಳೆದ ರಾಜಕೀ‌ಯ ಕಾರ್ಯಕರ್ತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಎದುರಾಳಿ‌ ಮಹಿಳೆ ಸೀರೆ ಎಳೆದ ರಾಜಕೀ‌ಯ ಕಾರ್ಯಕರ್ತರು

ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ರಾಜಕೀಯ ರಾದ್ಧಾಂತ ಮೇರೆ ಮೀರಿದೆ.‌ ಪರಿಸ್ಥಿತಿ ‌ನಿಯಂತ್ರಿಸಲು ಪೊಲೀಸರಿಂದ ಗುಂಡಿನ ಮೊರೆತ ಸಹ ಕೇಳಿದೆ.

ಲಕ್ನೋದಿಂದ 130 ಕಿ.ಮೀ ದೂರದಲ್ಲಿರುವ ಲಖಿಂಪುರ ಖೇರಿಯಲ್ಲಿ ನಡೆದ ಘಟನೆಯಲ್ಲಿ ಸಮಾಜವಾದಿ ಪಕ್ಷದ ಮಹಿಳಾ ಕಾರ್ಯಕರ್ತೆಯೊಬ್ಬರ ಸೀರೆಯನ್ನು ಎದುರಾಳಿ ಪಕ್ಷದ ಪುರುಷ ಕಾರ್ಯಕರ್ತರು ಎಳೆದಾಡಿದ ಪ್ರಸಂಗ ನಡೆದಿದೆ.

ಪೂರಿ ಹಾರ ಹಾಕಿಕೊಂಡು ಮದುವೆಗೆ ತಯಾರಾದ ವಧು…!

ನಾಮಪತ್ರ ಸಲ್ಲಿಸಲು ಅಭ್ಯರ್ಥಿಯ‌ ಜತೆ ಸೂಚಕರಾಗಿ ತೆರಳುವ ವೇಳೆ ಆಕೆಯನ್ನು ತಡೆಯುವ ಪ್ರಯತ್ನ ಮಾಡಲಾಗಿತ್ತು. ಸರಿಯಾದ ಸಮಯಕ್ಕೆ ನಾಮಪತ್ರ ಸಲ್ಲಿಸದೆ ಇದ್ದರೆ ಅವಿರೋಧ ಆಯ್ಕೆ ಆಗುವ ಕಾರಣಕ್ಕೆ ತಡೆಯುವ ಪ್ರಯತ್ನ ನಡೆದಿತ್ತು ಎಂದು ಹೇಳಲಾಗಿದೆ.

ಸರಿಯಾದ ಸಮಯದೊಳಗೆ ನಾಮಪತ್ರ ಸಲ್ಲಿಸದಂತೆ ತಡೆಯಲು ಎದುರಾಳಿಗಳು ಅಭ್ಯರ್ಥಿಯ ನಾಮಪತ್ರಗಳನ್ನು ಕಸಿದುಕೊಂಡರು.‌ ಈ ದಾಳಿಕೋರರು ಬಿಜೆಪಿ ಕಾರ್ಯಕರ್ತರು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ ಮತ್ತು ವಿಡಿಯೊವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ, ಅವರನ್ನು “ಅಧಿಕಾರದ ಹಸಿವಿನಲ್ಲಿರುವ ಯೋಗಿ ಆದಿತ್ಯನಾಥ್ ಅವರ ಗೂಂಡಾಗಳು” ಎಂದು ಕರೆದಿದ್ದಾರೆ.

ಸೋನುಸೂದ್‌ಗೆ ಸಚಿವರಿಂದ ವೆಜ್ ಬಿರಿಯಾನಿ ಟ್ರೀಟ್

825 ಬ್ಲಾಕ್ ಪ್ರಮುಖ್ ಅಥವಾ ಸ್ಥಳೀಯ ಪಂಚಾಯತ್ ಮುಖ್ಯಸ್ಥರ ಆಯ್ಕೆಗೆ ನಾಮಪತ್ರ ಪ್ರಕ್ರಿಯೆ ನಡೆದಿದ್ದು, ಒಂದು ಡಜನ್‌ಗೂ ಹೆಚ್ಚು ಸ್ಥಳಗಳಲ್ಲಿ ಘರ್ಷಣೆಗಳು ಆದ ಬಗ್ಗೆ ವರದಿಯಾಗಿವೆ.

ಕಾಂಗ್ರೆಸ್ ಮುಖಂಡ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹಿಂಸಾಚಾರದ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರನ್ನು ಗುರಿಯಾಗಿಸಿ ಪೋಸ್ಟ್ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...