alex Certify ಅಭ್ಯರ್ಥಿ ಎಂದು ಘೋಷಿಸಿದ್ರೂ ಸಿಗದ ಟಿಕೆಟ್, ಬಿಕ್ಕಿ ಬಿಕ್ಕಿ ಅತ್ತ ಬಿಎಸ್‌ಪಿ ಕಾರ್ಯಕರ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭ್ಯರ್ಥಿ ಎಂದು ಘೋಷಿಸಿದ್ರೂ ಸಿಗದ ಟಿಕೆಟ್, ಬಿಕ್ಕಿ ಬಿಕ್ಕಿ ಅತ್ತ ಬಿಎಸ್‌ಪಿ ಕಾರ್ಯಕರ್ತ

ಲಖ್ನೋ: ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಕಾರ್ಯಕರ್ತ ಅರ್ಷದ್ ರಾಣಾ ಅವರು ವಿಧಾನಸಭೆ ಚುನಾವಣಾ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಭರವಸೆ ನೀಡಲಾಗಿತ್ತು ಆದರೆ, ಕೊನೆ ಕ್ಷಣದಲ್ಲಿ ನಿರಾಕರಿಸಲಾಗಿದೆ. ಚುನಾವಣೆಗೆ ಹೋರ್ಡಿಂಗ್ಸ್ ಕೂಡ ಹಾಕಿದ್ದೇನೆ ಎಂದು ತಿಳಿಸಿದ್ದಾರೆ.

ಚುನಾವಣಾ ಆಯೋಗ ಚುನಾವಣೆ ದಿನಾಂಕಗಳನ್ನು ಘೋಷಿಸಿದೆ. ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಚಟುವಟಿಕೆಯಲ್ಲಿ ತೊಡಗಿವೆ. ಅನೇಕರು ತಮ್ಮ ರಾಜಕೀಯ ಪಕ್ಷಗಳನ್ನು ಬದಲಾಯಿಸುವುದರೊಂದಿಗೆ ಪಕ್ಷಾಂತರ ಪರ್ವವೂ ಮುಂದುವರೆದಿದೆ.

ಮುಜಾಫರ್‌ ನಗರದ ಚಾರ್ತಾವಾಲ್‌ ಕ್ಷೇತ್ರದಿಂದ ಟಿಕೆಟ್‌ ಸಿಗದಿದ್ದಕ್ಕೆ ಬಿಎಸ್‌ಪಿ ಕಾರ್ಯಕರ್ತ ಅರ್ಷದ್‌ ರಾಣಾ ಅಸಮಾಧಾನಗೊಂಡಿದ್ದಾರೆ. ಪಕ್ಷದ ಹಿರಿಯ ಮುಖಂಡರೊಬ್ಬರು 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಈಗಾಗಲೇ 4.5 ಲಕ್ಷ ರೂ. ಕೊಟ್ಟಿದ್ದೇನೆ. ನಾನು 24 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. 2018 ರಲ್ಲಿ(2022 ಯುಪಿ ಚುನಾವಣೆಗೆ) ಚಾರ್ತಾವಾಲ್‌ ನಿಂದ ಔಪಚಾರಿಕವಾಗಿ ಅಭ್ಯರ್ಥಿ ಎಂದು ನನ್ನ ಹೆಸರು ಘೋಷಿಸಲಾಗಿದೆ. ನಾನು ಪಕ್ಷದೊಂದಿಗೆ ಸಂಪರ್ಕದಲ್ಲಿದ್ದು ಕೆಲಸ ಮಾಡಿದ್ದೇನೆ. ನನಗೇ ಟಿಕೆಟ್ ಕೊಟ್ಟಿಲ್ಲ ಎಂದು ಅವರು ಹೇಳಿದ್ದಾರೆ.

ಬಹುಜನ ಸಮಾಜ ಪಕ್ಷ(BSP) ಈಗಾಗಲೇ ಒಟ್ಟು 403 ಅಭ್ಯರ್ಥಿಗಳ ಪೈಕಿ ಕನಿಷ್ಠ 300 ಅಭ್ಯರ್ಥಿಗಳನ್ನು ನಿರ್ಧರಿಸಿದೆ. ಇವರಲ್ಲಿ 90 ಅಭ್ಯರ್ಥಿಗಳು ದಲಿತ ಸಮುದಾಯದವರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...