alex Certify ಎಲಾನ್​ ಮಸ್ಕ್​ ಟ್ವೀಟ್​ಗೆ ಟ್ವೀಟ್​ ಮೂಲಕವೇ ಉತ್ತರಿಸಿದ ಪೊಲೀಸರ ಕ್ರಮಕ್ಕೆ ಭಾರಿ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲಾನ್​ ಮಸ್ಕ್​ ಟ್ವೀಟ್​ಗೆ ಟ್ವೀಟ್​ ಮೂಲಕವೇ ಉತ್ತರಿಸಿದ ಪೊಲೀಸರ ಕ್ರಮಕ್ಕೆ ಭಾರಿ ಶ್ಲಾಘನೆ

ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್​ ಟ್ವಿಟ್ಟರ್ ಅನ್ನು ವಹಿಸಿಕೊಂಡಾಗಿನಿಂದ ಯಾವಾಗಲೂ ಸುದ್ದಿಯಲ್ಲಿದ್ದಾರೆ. ಟ್ವಿಟರ್​ ಉದ್ಯೋಗಿಗಳ ಸಾಮೂಹಿಕ ವಜಾಗೊಳಿಸುವಿಕೆ, ಸಾಂಸ್ಥಿಕ ರಚನೆಯಲ್ಲಿನ ಪ್ರಮುಖ ಬದಲಾವಣೆಗಳು ಮತ್ತು ಸಾಮಾಜಿಕ ಮಾಧ್ಯಮ ದೈತ್ಯದ ಕಾರ್ಯನಿರ್ವಹಣೆಯ ಕಾರಣದಿಂದಾಗಿ ಈ ಟೆಸ್ಲಾ ಮುಖ್ಯಸ್ಥ ಭಾರಿ ಜನಪ್ರಿಯರಾಗಿದ್ದಾರೆ.

ಮಸ್ಕ್​ ಅವರ ಟ್ವೀಟ್‌ಗಳು ಯಾವುದೇ ಸಮಯದಲ್ಲಿ ವೈರಲ್ ಆಗುತ್ತವೆ ಮತ್ತು ಗಮನ ಸೆಳೆಯುತ್ತವೆ. ಇದೀಗ ಅಂಥದ್ದೇ ಒಂದು ಟ್ವೀಟ್​ ವೈರಲ್​ ಆಗಿದೆ. ಇದಕ್ಕೆ ಕಾರಣ ಅವರ ಟ್ವೀಟ್​ಗೆ ಉತ್ತರ ಪ್ರದೇಶ ಪೊಲೀಸರು ಉತ್ತರಿಸಿರುವುದು. ಈ ಉತ್ತರವೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಎಲಾನ್​ ಮಸ್ಕ್​ ಒಂದು ಟ್ವೀಟ್​ ಮಾಡಿದ್ದರು. ಅದೇನೆಂದರೆ, ನಾನೊಂದು ಟ್ವೀಟ್​ ಮಾಡಿದೆನೆಂದರೆ ಅದು ನನ್ನ ಕರ್ತವ್ಯವೆಂದು ಪರಿಗಣಿಸಲಾಗುತ್ತದೆಯೇ ಎಂದು. ಈ ಟ್ವೀಟ್​ಗೆ ಉತ್ತರ ಪ್ರದೇಶದ ಪೊಲೀಸರು ಉತ್ತರಿಸಿದ್ದಾರೆ. ಅದೇನೆಂದರೆ, ಒಂದು ವೇಳೆ ಟ್ವೀಟ್​ನಲ್ಲಿ ನೀವು ಬರೆದ ಪ್ರಶ್ನೆಯನ್ನು ಉತ್ತರ ಪ್ರದೇಶದ ಪೊಲೀಸರು ಟ್ವೀಟ್​ನಲ್ಲಿಯೇ ಬಗೆಹರಿಸಿದರೆ ಅದನ್ನು ಕೆಲಸವೆಂದು ಹೇಳಲು ಆಗುತ್ತದೆಯೆ ಎಂದು ಕೇಳಿದ್ದಾರೆ.

ಮಸ್ಕ್​ ಅವರ ಟ್ವೀಟ್​ಗೆ ಪೊಲೀಸರು ನೀಡಿರುವ ಹಾಸ್ಯಭರಿತ ಉತ್ತರವೀಗ ಭಾರಿ ಸದ್ದು ಮಾಡುತ್ತಿದ್ದು, ಮಸ್ಕ್​ಗೆ ಇದಕ್ಕಿಂತ ಒಳ್ಳೆಯ ಉತ್ತರ ಸಿಗುವುದಿಲ್ಲ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...