ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ವಹಿಸಿಕೊಂಡಾಗಿನಿಂದ ಯಾವಾಗಲೂ ಸುದ್ದಿಯಲ್ಲಿದ್ದಾರೆ. ಟ್ವಿಟರ್ ಉದ್ಯೋಗಿಗಳ ಸಾಮೂಹಿಕ ವಜಾಗೊಳಿಸುವಿಕೆ, ಸಾಂಸ್ಥಿಕ ರಚನೆಯಲ್ಲಿನ ಪ್ರಮುಖ ಬದಲಾವಣೆಗಳು ಮತ್ತು ಸಾಮಾಜಿಕ ಮಾಧ್ಯಮ ದೈತ್ಯದ ಕಾರ್ಯನಿರ್ವಹಣೆಯ ಕಾರಣದಿಂದಾಗಿ ಈ ಟೆಸ್ಲಾ ಮುಖ್ಯಸ್ಥ ಭಾರಿ ಜನಪ್ರಿಯರಾಗಿದ್ದಾರೆ.
ಮಸ್ಕ್ ಅವರ ಟ್ವೀಟ್‌ಗಳು ಯಾವುದೇ ಸಮಯದಲ್ಲಿ ವೈರಲ್ ಆಗುತ್ತವೆ ಮತ್ತು ಗಮನ ಸೆಳೆಯುತ್ತವೆ. ಇದೀಗ ಅಂಥದ್ದೇ ಒಂದು ಟ್ವೀಟ್ ವೈರಲ್ ಆಗಿದೆ. ಇದಕ್ಕೆ ಕಾರಣ ಅವರ ಟ್ವೀಟ್ಗೆ ಉತ್ತರ ಪ್ರದೇಶ ಪೊಲೀಸರು ಉತ್ತರಿಸಿರುವುದು. ಈ ಉತ್ತರವೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಎಲಾನ್ ಮಸ್ಕ್ ಒಂದು ಟ್ವೀಟ್ ಮಾಡಿದ್ದರು. ಅದೇನೆಂದರೆ, ನಾನೊಂದು ಟ್ವೀಟ್ ಮಾಡಿದೆನೆಂದರೆ ಅದು ನನ್ನ ಕರ್ತವ್ಯವೆಂದು ಪರಿಗಣಿಸಲಾಗುತ್ತದೆಯೇ ಎಂದು. ಈ ಟ್ವೀಟ್ಗೆ ಉತ್ತರ ಪ್ರದೇಶದ ಪೊಲೀಸರು ಉತ್ತರಿಸಿದ್ದಾರೆ. ಅದೇನೆಂದರೆ, ಒಂದು ವೇಳೆ ಟ್ವೀಟ್ನಲ್ಲಿ ನೀವು ಬರೆದ ಪ್ರಶ್ನೆಯನ್ನು ಉತ್ತರ ಪ್ರದೇಶದ ಪೊಲೀಸರು ಟ್ವೀಟ್ನಲ್ಲಿಯೇ ಬಗೆಹರಿಸಿದರೆ ಅದನ್ನು ಕೆಲಸವೆಂದು ಹೇಳಲು ಆಗುತ್ತದೆಯೆ ಎಂದು ಕೇಳಿದ್ದಾರೆ.
ಮಸ್ಕ್ ಅವರ ಟ್ವೀಟ್ಗೆ ಪೊಲೀಸರು ನೀಡಿರುವ ಹಾಸ್ಯಭರಿತ ಉತ್ತರವೀಗ ಭಾರಿ ಸದ್ದು ಮಾಡುತ್ತಿದ್ದು, ಮಸ್ಕ್ಗೆ ಇದಕ್ಕಿಂತ ಒಳ್ಳೆಯ ಉತ್ತರ ಸಿಗುವುದಿಲ್ಲ ಎಂದಿದ್ದಾರೆ.