alex Certify Watch Video | ಜನ ಮೆಚ್ಚುಗೆಗೆ ಪಾತ್ರವಾಗಿದೆ ಪೊಲೀಸರು ಮಾಡಿರುವ ಮಾನವೀಯ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಜನ ಮೆಚ್ಚುಗೆಗೆ ಪಾತ್ರವಾಗಿದೆ ಪೊಲೀಸರು ಮಾಡಿರುವ ಮಾನವೀಯ ಕಾರ್ಯ

ಪೊಲೀಸರೂ ಸಹ ಮಾನವೀಯತೆಯಿಂದ ವರ್ತಿಸುತ್ತಾರೆ ಎಂದು ಸಾಬೀತು ಪಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶ ಪೊಲೀಸ್ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಈ ವಿಡಿಯೋದಲ್ಲಿ, ಮೀರತ್‌‌ನಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಹಿರಿಯ ವ್ಯಕ್ತಿಯೊಬ್ಬರಿಗೆ ರಸ್ತೆಯಲ್ಲಿ ಚೆಲ್ಲಿದ್ದ ಧಾನ್ಯಗಳನ್ನು ಆಯ್ದುಕೊಳ್ಳಲು ನೆರವಾಗಿದ್ದಾರೆ.

ಕೇವಲ ಧಾನ್ಯವನ್ನು ಆರಿಸಿಕೊಟ್ಟಿದ್ದು ಮಾತ್ರವಲ್ಲದೇ ಆ ವ್ಯಕ್ತಿಯನ್ನು ಸುರಕ್ಷಿತವಾಗಿ ಮನೆಗೂ ಸೇರಿಸಿ ಬಂದಿದ್ದಾರೆ ಈ ಅಧಿಕಾರಿ ಎಂದು ವಿಡಿಯೋಗೆ ಹಾಕಿರುವ ವಿವರಣೆಯಲ್ಲಿ ನೀಡಲಾಗಿದೆ.

ವಿಡಿಯೋದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಧಾನ್ಯಗಳನ್ನು ಆರಿಸುತ್ತಿದ್ದರೆ, ಮಿಕ್ಕವರು ರಸ್ತೆಯಲ್ಲಿ ಬರುತ್ತಿದ್ದ ವಾಹನಗಳನ್ನು ರಸ್ತೆಯ ಮತ್ತೊಂದು ಬದಿಯಲ್ಲಿ ಚಲಿಸುವಂತೆ ಸೂಚನೆ ನೀಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...